ಒಳ ಮೀಸಲಾತಿ ತೀರ್ಪು: ಹೋರಾಟಕ್ಕೆ ಸಂದ ಜಯ
ಕಲಬುರಗಿ: ಆ.2:ಒಳ ಮೀಸಲಾತಿ ನ್ಯಾಯಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ ತೀರ್ಪು ನೀಡಿದ್ದು ಸ್ವಾಗತಾರ್ಹ ಸಂಗತಿಯಾಗಿದೆ.ಇದು ಸುದೀರ್ಘ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕಾಳಗಿ ತಾಲೂಕಿನ ಮಾದಿಗ ಸಮಾಜದ ಮುಖಂಡ ರವಿ ಸಿಂಗೆ ಅರಣಕಲ್ ಹಾಗೂ ಸಮಾಜದ ಬಾಂಧವರು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.