ಮೂಲಭೂತ ಸೌಕರ್ಯ ವಂಚಿತ ಗಡಿಭಾಗದ ಕುಲಾಲಿ ರೈಲು ನಿಲ್ದಾಣಡೆಮೊ ರೈಲು ನಿಲುಗಡೆಗೆ ಸಭೆಯಲ್ಲಿ ಒತ್ತಾಯ
ಆಳಂದ:ಆ.2: ಕೋವಿಡ ನಂತರ ಕುಲಾಲಿ ನಿಲ್ದಾಣದಲ್ಲಿ ನಿಲುಗಡೆಯಾಗುವ ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತ ಮಾಡಲಾಗಿದೆ. ಇದರಿಂದ ಜನರಿಗೆ ಅನಾನುಕೂಲವಾಗಿದೆ. ಮತ್ತೆ ರೈಲ ನಿಲ್ಲಗಡೆ ಆರಂಬಿಸಬೇಕೆAದು ಕುಲಾಲಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ರವೀಂದ್ರ ಕುಮಾರ ಅವರನ್ನು ಸ್ಥಳೀಯ ಮುಖಂಡರು ಒತ್ತಾಯಿಸಿದರು.
ಕುಲಾಲಿ ರೈಲು ನಿಲ್ದಾಣದ ಕಾರ್ಯಲದಲ್ಲಿ ಕರೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮುಖಂಡರು ಅಧಿಕಾರಿಗಳ ಗಮನ ಸೆಳೆದರು.
ಸಭೆಯಲ್ಲಿ ಕುಲಾಲಿ ನಿಲ್ದಾಣದ ನಾಮನಿರ್ದೇಶನ ಸದಸ್ಯ ಅಮರನಾಥ ಚವ್ಹಾಣ್ ಮಾತನಾಡಿ, ಮದ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಬರುವ ಕುಲಾಲಿ ರೈಲು ನಿಲ್ದಾಣವೂ ರಾಜ್ಯ ಗಡಿಭಾಗದ ಕೊನೆಯ ನಿಲ್ದಾಣವಾಗಿದ್ದು, ಅಫÀಜಲಪೂರ ಮತ್ತು ಆಳಂದ ತಾಲೂಕಿನ 30ಕ್ಕೂ ಹೆಚ್ಚು ಹಳ್ಳಿಯ ಜನರು ನಿಲ್ದಾಣದಿಂದ ಕಲಬುರಗಿ, ಸೋಲಾಪುರ, ಪುಣೆ, ಮುಂಬಯಿ, ಬೆಂಗಳೂರು ನಗರಗಳಿಗೆ ಹೋಗಲು ಅನುಕೂಲವಾಗಿತ್ತು.
ಆದರೆ, ಕೋವಿಡ ಮುಂಚೆ 10 ಬಾರಿ ರೈಲುಗಳು ಇಲ್ಲಿ ನಿಲುಗಡೆಯಾಗುತ್ತಿದ್ದವು. ನಂತರ ಈ ರೈಲುಗಳನ್ನು ಎಕ್ಸಪ್ರೇಸ್ ರೈಲುಗಳನ್ನಾಗಿ ಮಾಡಿದರಿಂದ ಇಲ್ಲಿ ನಿಲ್ಲುತ್ತಿಲ್ಲ. ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಇನ್ನು ಮುಂದೆಯಾದರೂ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗಿ 10 ಗಂಟೆಗೆ ಮತ್ತು ಸಾಯಂಕಾಲ 5ಗಂಟೆಗೆ ಕುಲಾಲಿ ನಿಲ್ದಾಣದಲ್ಲಿ ಕಲಬುರಗಿ ಸೋಲಾಪುರ ನಗರಗಳಿಗೆ ಹೋಗಿ ಬರಲು ರೈಲು ನಿಲ್ಲಗಡೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಡೆಮೊ ಗಾಡಿ ಸಂಖ್ಯೆ 01465 ಹಾಗೂ 01466 ಸೋಲಾಪುರ ವಾಡಿ ನಡುವೆ ಓಡಾಡುತ್ತಿದೆ. ಇದರ ಹಿಂದೆ ಮುಂದೆ ಎಕ್ಸಪ್ರೇಸ್ ರೈಲುಗಳು ಓಡಾಡುತ್ತಿವೆ. ಇದರಿಂದ ರೈಲು ಖಾಲಿ ಓಡಾಡುತ್ತಿದೆ. ಇದನ್ನು ಕಲಬುರಗಿ ಸೋಲಾಪುರ ನಡುವೆ ಓಡಾಡುವಂತೆ ಮಾಡಬೇಕು ಮತ್ತು ಕುಲಾಲಿಯಲ್ಲಿ ನಿಲುಗಡೆಯಾಗುವಂತೆ ಮಾಡಬೇಕೆಂದರು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಮೂಲಸೌಲಭ್ಯ ಕುರಿತು ಪ್ರಸ್ತಾಪಿಸಿದ ಮುಖಂಡರು, ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ತಂಗುವ ಪ್ರಯಾಣಿಕರು ವಾಸಿಸಲು ಕೋಣೆಗಳಿಲ್ಲ, ಪ್ರಯಾಣಿಕರು ಕುಳಿತು ಕೊಳ್ಳಲು ಆಸನಗಳ ವ್ಯವಸ್ಥೆ, ಸುಲಭ ಶೌಚಾಲಯ, ಅಂಗವಿಕಲರಿಗಾಗಿ ಲಿಪ್ಟ ವ್ಯವಸ್ಥೆ ಇಲ್ಲ. ಈ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಪ್ಲಾಟ್‌ಪಾರ್ಮ ನಂ-2ನ್ನು ಎತ್ತರಿಸಬೇಕು. ಅಫÀಜಲಪೂರ ತಾಲೂಕಿನ ಅರ್ಜುಣಿಗಿ ಗ್ರಾಮದ ಹತ್ತಿರ ರೈಲು ಹಳಿ ಬಳಿ ಪಾದಾಚಾರಿ ಸೇತುವೆ ನಿರ್ಮಿಸಬೇಕು, ಔರಾದ ಸದಾಶಿವಗಡ ರಾಜ್ಯ ಹೆದ್ದಾರಿಗೆ ಅಂಡರ್ ಅಥವಾ ಓವರ್ ಬ್ರೀಜ್ ನಿರ್ಮಾಣ ಕಾಮಗಾರಿ ಆರಂಬಿಸಬೇಕು ಎಂದು ಸಭೆಯ ಮೂಲಕ ರೈಲು ಇಲಾಖೆಯ ಸಚಿವರಿಗೆ ಮತ್ತು ವಿಭಾಗದ ಅಧಿಕಾರಿಗಳಿಗೆ ಮನವಿಯ ಪತ್ರವನ್ನು ಸಲ್ಲಿಸಿದರು.
ಸ್ಟೇಷನ್ ವ್ಯಾಪ್ತಿಯ ಜನರ ಬೇಡಿಕೆಯ ಕುರಿತು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸಭೆಯಲ್ಲಿದ್ದ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಬೇಡಿಕೆ ಈಡೇರಿಕೆಗೆ ತ್ವರಿಗತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮುಖಂಡರು ಪಟ್ಟುಹಿಡಿದು ಒತ್ತಾಯಿಸಿದರು.