ಸಚಿವ ಜಮೀರ್ ಹುಟ್ಟು ಹಬ್ಬ:ಅಭಿಮಾನಿಗಳಿಂದ ಬ್ರೆಡ್-ಹಣ್ಣು ವಿತರಣೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಆ2: ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರ ಹುಟ್ಟು ಹಬ್ಬದ ಅಂಗವಾಗಿ ವಿಜಯನಗರ ಜಿಲ್ಲಾ ಬಿ. ಜೆಡ್ ಜಮೀರ್ ಅಹಮದ್ ಖಾನ್ ಅಭಿಮಾನಿ ಬಳಗದ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಗುರುವಾರ ಬ್ರೆಡ್, ಹಣ್ಣು ವಿತರಿಸಲಾಯಿತು.
ಮುಖಂಡರಾದ ಹುಲುಗಪ್ಪ, ಗೌರಿಶಂಕರ್ ಬಣಕಾರ್, ತೇಜಾ ನಾಯಕ್ ಡಾ|| ಡಾ ದುರ್ವೇಶ್ ಮೈನುದ್ದಿನ್ ಜಫರುಲ್ಲಾ ಖಾನ್, ರಜಾಕ್, ರೆಹಮಾನ್, ವಿಜಯಕುಮಾರ್, ಮೊಹಮ್ಮದ್ ಜಾವೀದ್, ವಿ. ನಾಗರಾಜ, ಸಿ.ರಮೇಶ, ರಾಜ, ಆರ್ ವಿನಾಯಕ, ಬಂಡಿ ಬಾಷಾ, ಸಾದಿಕ್ ಅಲಿ, ಪಾಡುರಂಗ, ಶ್ರೀನಿವಾಸ, ಮೆಹಬೂಬ್ ಜಡಿಯಪ್ಪ, ವಿರೂಪಾಕ್ಷಿ ಹಾಗೂ ಸಚಿವ ಜಮೀರ್ ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.