10 ಗಂಟೆಯಲ್ಲಿ 50 ಎಕರೆ ಹೊಲ ಹರಗಿ ಉತ್ತಮ ಸಾಧನೆ
ತಾಳಿಕೋಟೆ:ಆ.2: ತಾಲೂಕಿನ ಭಂಟನೂರ ಗ್ರಾಮದ ಮಲ್ಲನಗೌಡ ಶಿವನಗೌಡ ಆನೇಸೂರ ಅವರ ಜೊಡೆತ್ತುಗಳು 10 ಘಂಟೆಯಲ್ಲಿ 50 ಎಕರೆ ತೊಗರಿ ಬಿತ್ತನೆ ಮಾಡಿದ ಹೊಲವನ್ನು ಹರಗುವದರೊಂದಿಗೆ ಉತ್ತಮ ಸಾಧನೆ ಮಾಡಿವೆ.
ಭಂಟನೂರ ಗ್ರಾಮದ ವೆಂಕಟೇಶ ಕುಲಕರ್ಣಿ ಅವರಿಗೆ ಸೇರಿದ 50ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾದ ತೋಗರಿ ಹೂಲ ಹರಗುವ ಜಿದ್ದಿಗೆ ಕಟ್ಟಿದ್ದ ಮಲ್ಲನಗೌಡ ಶಿವನಗೌಡ ಆನೇಸೂರ ಅವರು ತಮ್ಮ ಎತ್ತುಗಳ ಮೇಲೆ ನಂಬಿಕೆ ವಿಸ್ವಾಸವಿಟ್ಟು ನಸುಕಿನ ಜಾವ 4 ಗಂಟೆಗೆ ಪ್ರಾರಂಬಿಸಿದ ಹರಗುವ(ಕಸ ಸ್ವಚ್ಚಗೊಳಿಸುವ)ಕೆಲಸದಲ್ಲಿ ಮಾಲಿಕನ ವಿಸ್ವಾಸವನ್ನು ಎತ್ತಿ ತೋರಿಸುವಂತೆ 10 ಗಂಟೆಗಳಲ್ಲಿ 50 ಎಕರೆ ಜಮೀನನ್ನು ಹರಿಗಿ(ಸ್ವಚ್ಚಗೊಳಿಸಿ) ಸಾಧನೆ ತೋರಿದ್ದು ಗ್ರಾಮಸ್ಥರಿಗೆ ಸಂತಸವನ್ನುAಟು ಮಾಡಿದೆ.
ಸಾಧನೆಗೈದ ಮಲ್ಲನಗೌಡ ಶಿವನಗೌಡ ಆನೇಸೂರ ಅವರನ್ನೋಳಗೊಂಡು ಜೋಡೆತ್ತುಗಳನ್ನು ಗ್ರಾಮಸ್ಥರರು ಅತ್ಯಂತ ಸಂಭ್ರಮದೊAದಿಗೆ ಗುಲಾಲ್ ಎರಚಿ ಪಟಾಕ್ಷೀ ಸಿಡಿಸಿ ಹಲಗೆ ಮಜಲುಗಳುಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸೋಮನಗೌಡ ಆನೇಸೂರ, ಬಸವರಾಜ ಸಿಂಗನಳ್ಳಿ, ಸಂಗನಗೌಡ ಮೂಲಿಮನಿ, ಮಲ್ಲನಗೌಡ ಆನೇಸೂರ, ಬಾಲಚಂದ್ರಗೌಡ ಬಸರಡ್ಡಿ, ಶಿವಾಜಿ ವಡ್ಡವಡಗಿ, ಬಸನಗೌಡ ಬಸರಡ್ಡಿ, ಸಂಗನಗೌಡ ಆನೇಸೂರ, ನಾನಾಗೌಡ ಬಸರಡ್ಡಿ, ರಾಮನಗೌಡ ಅರಕೆರಿ, ಬಸವರಾಜ ತಳ್ಳಳ್ಳಿ, ರಾಮನಗೌಡ ನಡಹಳ್ಳಿ, ಮಲ್ಲನಗೌಡ ಕುಪ್ಪಿ, ಮಧುಪತಿ ಹಾಲಗಡ್ಲಿ, ಹಾಗೂ ಬಂಟನೂರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಎತ್ತಿನ ಮಾಲಿಕ ಮಲ್ಲನಗೌಡ ಆನೇಸೂರ ಹಾಗೂ ಎರಡು ಜೋಡೆತ್ತುಗಳಿಗೆ ಗ್ರಾಮಸ್ಥರರು ಸನ್ಮಾನಿಸಿ ಗೌರವಿಸಿ ಸಾಧನೆಯನ್ನು ಕೊಂಡಾಡಿದರು.