ಸಂಭ್ರಮಾಚರಣೆ
ನವಲಗುAದ,ಆ೨: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿ, ದಲಿತ ಸಂಘಟನೆಗಳ ಸದಸ್ಯರು ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, `ಪರಿಶಿಷ್ಟ ಜಾತಿಯಲ್ಲಿ ೧೦೧ ಉಪ ಜಾತಿಗಳಿವೆ. ನ್ಯಾಯಾಲಯದ ತೀರ್ಪಿನಿಂದ ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ’ ಎಂದು ಹೇಳಿದರು.
ಸಮುದಾಯದ ಯುವ ಹೋರಾಟಗಾರ ಶಿವ ಪೂಜಾರ್ ಮಾತನಾಡಿ ಸುಮಾರು ೩೦ ವರ್ಷಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ ನಿಂದ ಜಯ ಸಿಕ್ಕಿದೆ ಮತ್ತು ಒಳ ಮೀಸಲಾತಿ ಹೋರಾಟಕ್ಕೆ ಪ್ರಾಣ ಕೊಟ್ಟವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು
ಈ ಸಂದರ್ಭದಲ್ಲಿ ದ್ಯಾಮಣ್ಣ ಹೊನಕುದುರಿ, ಕುಮಾರ ಮಾದರ, ನಿಂಗಪ್ಪ ಕೆಳಗೇರಿ, ಶಿವಾನಂದ ಚಲವಾದಿ, ಹನುಮಂತಪ್ಪ ಕಿಳಗೇರಿ, ಕೃಷ್ಣ ಮಾದರ, ಕಲ್ಲಪ್ಪ ಮಾದರ, ಸಂಗಪ್ಪ ಮಾದರ ಇದ್ದರು.