ವಿದ್ಯುತ್ ತಂತಿ ತಗುಲಿ ಯುವ ರೈತ ಸಾವು
ಆಳಂದ:ಆ.2: ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಹಿತ್ತಲಶಿರೂರ ಗ್ರಾಮದಲ್ಲಿ ಜರುಗಿದೆ. ಗುರುರಾಜ ಕೊಳ್ಳೂರು (24) ಮೃತ ಯುವ ರೈತನಾಗಿದ್ದು, ತನ್ನ ಜಮೀನಿನಲ್ಲಿ ವಿದ್ಯುತ್ ಕಂಬ ವಾಲಿದ್ದು, ವೈರ್ ಕೆಳಗಡೆ ಜೋತು ಬಿದ್ದಿತ್ತು. ಇದನ್ನು ಗಮನಿಸದೆ ಕೃಷಿ ಚಟುವಟಿಕೆ ನಡೆಸುತ್ತಿದ್ದಾಗ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ಮಗನ ಸಾವಿಗೆ ಅಕ್ರಂದತೋಡಿಕೊAಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜಮೀನಿಗೆ ಭೇಟಿ ನೀಡಿ ಜೆಸ್ಕಾಂ ವಿರುದ್ಧ ಕಿಡಿಕಾರಿದರು.
ಈ ಘಟನೆಗೆ ಜೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೇ ಯುವಕನ ಸಾವಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮೃತದೇಹದೊಂದಿಗೆ ಆಕ್ರೋಶಸ ಹೊರಹಾಕಿದ್ದರು.
ನಿಂಬರ್ಗಾ ಪಿಎಸ್‌ಐ ಇಂದುಬಾಯಿ, ಜೆಸ್ಕಾಂ ನಿಂಬರ್ಗಾ ಜೆಇ ಶರಣಬಸಪ್ಪ, ಕಡಗಂಚಿ ಎಇಇ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿಕೊಂಡು ಕೂಡಲೇ ನಿಂಬರ್ಗಾ ಜೆಸ್ಕಾಂ ಜೆಇ ಹಾಗೂ ಲೈನ್‌ಮನ್ ಅವರನ್ನು ಅಮಾನತು ಮಾಡಿ, ಪ್ರಕರಣ ದಾಖಲಿಸಬೇಕು. ಯುವಕನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗೆ ಸ್ಪಂದಿಸದಿದ್ದರೆ ಮೃತದೇಹದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸದಿರುವುದರಿAದ ರಾತ್ರಿ 10 ಗಂಟೆವರೆಗೂ ಪ್ರತಿಭಟನೆ ಪ್ರತಿಭಟನೆ ನಡೆಸಿದ್ದರು. ಯುವಕನ ತಂದೆ ಕಲ್ಯಾಣಿ ಕೊಳ್ಳೂರು, ತಾಯಿ ಮಲ್ಲಮ್ಮ, ಸಹೋದರರಾದ ನಾಗರಾಜ ಶ್ರೀಶೈಲ, ಪ್ರಮುಖರಾದ ಗುರುಲಿಂಗಪ್ಪ ಮಾಲಿಪಾಟೀಲ್, ಶರಣಬಸಪ್ಪ ಜಿಡಿಗಿ, ಅಮೃತ ಸರಸಂಭಿ, ಶಿವಲಿಂಗಪ್ಪ ಮಾಡ್ಯಾಳ, ಗುರು ಉಪ್ಪಿನ್, ಚಂದ್ರಕಾAತ ಅವಟೆ, ಅಣ್ಣಾರಾವ ಪೊಲೀಸ್ ಪಾಟೀಲ್, ಚಂದ್ರಶಾ ಸನಗುಂದಿ, ಚಂದ್ರಕಾAತ ಪೂಲಾರಿ ಇತರರಿದ್ದರು. ನಿಂಬರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.