ವಕೀಲರ ಸಂಘದ ಚುನಾವಣೆಬಿರುಸಿನ ಮತದಾನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,2- ಇಲ್ಲಿನ ಬಳ್ಳಾರಿ ವಕೀಲರ ಸಂಘದ  ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯತ್ವದ ಚುನಾವಣೆಗೆ ಮತದಾನ ಪ್ರಕ್ರಿಯೆ ಇಂದು  ಬೆಳಿಗ್ಗೆ 9 ರಿಂದ  ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಸಂಘದ ಕಟ್ಟಡದ ಎರಡನೇ ಅಂತಸ್ತಿನಲ್ಲಿ  ನಡೆಯಿತು.
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ,  ಜಂಟಿ ಕಾರ್ಯದರ್ಶಿ (ಮಹಿಳೆ), ಖಜಾಂಚಿ ಹಾಗು 10 ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಿತು. 
ಮತದಾನ‌ ಮಾಡಲು1160 ಕ್ಕೂ ಹೆಚ್ಚು ಜನ ಅರ್ಹತೆ ಪಡೆದಿದ್ದು.. ಆರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಆರು ಪ್ರತ್ಯೇಕ ಮತ ಪತ್ರದಲ್ಲಿ ಮತದಾನ ಮುದ್ರೆ ಹಾಕಲಾಗುತ್ತಿತ್ತು.
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ,  ಜಂಟಿ ಕಾರ್ಯದರ್ಶಿ (ಮಹಿಳೆ) ನೇರ ಪೈಪೋಟಿ ಇತ್ತು ಖಜಾಂಚಿಗೆ ಮಾತ್ರ ತ್ರಿಕೋನ ಸ್ಪರ್ಧೆ ಇತ್ತು. 10 ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಗಳಿಗೆ 16 ಜನ ಕಣದಲ್ಲಿದ್ದಾರೆ.
ಹಿರಿಯರ ಎ ಪ್ಯಾನಲ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಎಲ್.ಟಿ.ಶೇಖರ್, ಕಾರ್ಯದರ್ಶಿ ಸ್ಥಾನಕ್ಕೆ ಅನ್ಸರ್ ಭಾಷಾ. ಉಪಾಧ್ಯಕ್ಷ ಸ್ಥಾನಕ್ಕೆ  ಯಶೋಧರ ಮೂರ್ತಿ. ಖಜಾಂಚಿ ಸ್ಥಾನಕ್ಕರ  ಕರೂರ್ ಬಸವರಾಜ.ಕಾರ್ಯಕಾರಿ ಸಮಿತಿಗೆ ಬಿ. ರಾಘವೇಂದ್ರ ಮೋಹನ್, ಗೋವಿಂದಯ್ಯ (ವಿಷ್ಣು ಎಂ.ಕೆ.ಮೂರ್ತಿ, ಟಿ.ನಾಗನಗೌಡ, ಹುಲುಗಪ್ಪ, ಹಂಪಯ್ಯ, ಬಸರೆಡ್ಡಿ ಶೇಖಣ್ಣ, ಸತ್ತಾರ್ ಮತ್ತು ಇರ್ಫಾನ್
ಕಣದಲ್ಲಿದ್ದಾರೆ.
ಬಿ.ಪ್ಯಾನಲ್ ನಲ್ಲಿ ಅಧ್ಯಕ್ಷಸ್ಥಾನಕ್ಕೆ ರಾಮಬ್ರಹಂ , ಕಾರ್ಯದರ್ಶಿಗೆ ಗುರುಬಸವರಾಜ್ ಮೊದಲಾದವರು ಸ್ಪರ್ಧೆ ಮಾಡಿದ್ದಾರೆ.
ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕೆ.ಕೋಟೇಶ್ವರ ರಾವ್, ಮಾಜಿ ಅಧ್ಯಕ್ಷ ಉಡೇದ ಬಸವರಾಜ್,  ಸಂಘದ ಮಾಜಿ ಅಧ್ಯಕ್ಷರು ಹಿರಿಯ ವಕೀಲರಾದ ಆರ್. ಪಾಂಡು, ಬಿ.ವಿ.ಬಸವರಾಜ್, ಜಾನೆಕುಂಟೆ ಬಸವರಾಜ್. ಪಾಟೀಲ್ ಸಿದ್ದಾರೆಡ್ಡಿ, ಎನ್.ಅಯ್ಯಪ್ಪ,  ಹೆಚ್.ಎಂ.ಅಂಕಲಯ್ಯ, ವಿ.ಜನಾರ್ಧನ,  ಎ.ಜಿ.ಶಿವಕುಮಾರ್, ಡಿ.ಎಸ್.ಬದ್ರಿನಾಥ್.
ಹಿರಿಯರಾದ ಕೆ.ವೆಂಕಟೇಶ್ವರಲು, ರವೀಂದ್ರನಾಥ ಬಣಾಪುರ, ನೀಲನಗೌಡ, ಗೋಟೂರು ರವಿರಾಜಶೇಖರ ರೆಡ್ಡಿ, ಮಹೇಶ್ವರ ಸ್ವಾಮಿ,