ವೀರಶೈವ ಕಾಲೇಜಿ ನಲ್ಲಿ ವ್ಯಸನ ಮುಕ್ತ ದಿನಾಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ,2- ನಗರದ ವೀರಶೈವ ಮಹಾವಿದ್ಯಾಲಯದಲ್ಲಿ ಶ್ರೀಮ.ನಿ.ಪ್ರ. ಡಾ.ಮಹಂತ ಶಿವಯೋಗಿಗಳವರು, ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠ ಇಳಕಲ್ಲು ಇವರ ಜನ್ಮ  ದಿನವನ್ನು  ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸಲಾಯಿತು,
ಕಾರ್ಯಕ್ರಮ ಉದ್ಘಾಟಿಸಿದ ಡಾ.ರಾಜಶ್ರೀ ಪಾಟೀಲ್ ಮಾತನಾಡಿ, ನಾವೆಲ್ಲರೂ ಸ್ವಾಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ ಒಳ್ಳೆಯ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ, ಯುವಕರು ದುಶ್ಚಟಗಳಿಂದ ದೂರವಿರಬೇಕು ಕೆಟ್ಟ ಚಟಗಳಳು ಸಮಾಜವನ್ನು ಹಾಳು ಮಾಡುತ್ತವೆ ಇದರಿಂದ ಮುಕ್ತರಾಗಬೇಕು ಎಂದರು.
 ಶ್ರೀ ಮಹಾಂತ ಶಿವಯೋಗಿ ಅವರದು ಅಪರೂಪದ ಸಮಾಜ ಸೇವಕರು. ಸುಖಿ ಮತ್ತು ಆರೋಗ್ಯ ಸಮಾಜ ನಮ್ಮದಾಗಬೇಕೆಂದು ಕನಸು ಕಂಡು ಅದೇ ಮಾರ್ಗದಲ್ಲಿ ನಡೆದವರು. ಸಾವಿರಾರು ಹಳ್ಳಿ ಹಳ್ಳಿಗಳನ್ನು ಸುತ್ತಿ ಜೋಳಿಗರ ಹಿಡಿದು ದುಶ್ಚಟಗಳನ್ನು ಬಿಡಿಸಲು ತಮ್ಮನ್ನ  ಸಂಪೂರ್ಣ  ತೊಡಗಿಸಿ ಕೊಂಡವರು. ಬೀಡಿ ಸಿಗರೇಟು ಗಾಂಜ ತಂಬಾಕು ಮದ್ಯಪಾನ ಇತರೆ ಕೆಟ್ಟ ಚಟಗಳನ್ನು ಮಾಡುವವರಿಗೆ ಅದಕ್ಕೆ ದಾಸರಾಗುವವರ ಬಳಿ ಹೋಗಿ ಇವು ಕೆಟ್ಟ ಚಟಗಳು ನಿಮ್ಮನ್ನು ನಿಮ್ಮ ಕುಟುಂಬವನ್ನು ಸಮಾಜವನ್ನು ಹಾಳು ಮಾಡುತ್ತವೆ. ಎಂದು ಮನವರಿಕೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ದುಶ್ಚಟಗಳನ್ನು ದೂರವಿರುಸಿದರು, ತಮ್ಮ ಜೀವನದ ಕೊನೆಯವರೆಗೂ ಈ ಸಮಾಜ ಮುಖಿ ಸೇವೆಯನ್ನು ಮಾಡಿದರು.  ಸರ್ಕಾರವು ಇರುವ ಸೇವೆಯನ್ನು ಮೆಚ್ಚಿ ಅವರ ಜನ್ಮದಿನಾಚರಣೆಯನ್ನು ವ್ಯಸನಮುಕ್ತ ದಿನಾಚರಣೆಯಾಗಬೇಕು ಎಂದು ಘೋಷಿಸಿತು ಆ ಪ್ರಯುಕ್ತ ಪ್ರತಿ ವರ್ಷ ಆಗಸ್ಟ್ 1 ರಂದು ವ್ಯಸನ ಮುಕ್ತ ದಿನವಾಗಿ ಆಚರಿಸಲಾಗುತ್ತಿದೆ, ಅವರ ಸಂದೇಶಗಳನ್ನು ನಾವೆಲ್ಲರು ಅಳವಡಿಸಿಕೊಳಬೇಕು ಎಂದು ನಿವೃತ್ತ ಉಪನ್ಯಾಸಕ ಪೊ.ಸತ್ಯ ನಾರಾಯಣ ರೆಡ್ಡಿ ವ್ಯಸನ ಮುಕ್ತ ಸಮಾಜ  ಕುರಿತು ವಿದ್ಯಾರ್ಥಿಗಳಿಗೆವಿಶೇಷ ಉಪನ್ಯಾಸ ನೀಡಿದರು.
 ಶ್ರೀ ಪೂಜ್ಯರ ತತ್ವದ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪೊ.ಮಲ್ಲನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮದ್ಯಪಾನ ಮಾದಕವಸ್ತು, ತಂಬಾಕು ವಸ್ತುಗಳ ವ್ಯಸನ ಮುಕ್ತಗೊಳಿಸುವ ಪ್ರತಿಜ್ಞಾವಿಧಿಯನ್ನ ಡಾ,ಶರಣಬಸವ ಬೋಧಿಸಿದರು.
 ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬಂದಿ ವಿದ್ಯಾರ್ಥಗಳು ಭಾಗವಹಿಸಿದ್ದರು. ಡಾ,ಶ್ಯಾಮೂರ್ತಿ .ಜಿ ಕನ್ನಡ ವಿಭಾಗ ಕಾರ್ಯಕ್ರಮವನ್ನು ಆಯೋಜಿಸಿ ನಿರೂಪಿಸಿದರು.