ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ
ಲಕ್ಷೆ÷್ಮÃಶ್ವರ,ಆ.೨: ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದಲ್ಲಿ ತುಂಗಭದ್ರಾ ನದಿ ರೌದ್ರಾವತಾರ ತಾಳಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಇರುತ್ತದೆ.
ಈಗ ತುಂಗಭದ್ರಾ ನದಿಯ ಪ್ರವಾಹಕ್ಕೆ ಸುಮಾರು ೫೦೦ ಹೆಕ್ಟೇರ್ ಪ್ರದೇಶದಲ್ಲಿನ ಭತ್ತ ಗೋವಿನ ಜೋಳ ತೆಂಗು ಅಡಿಕೆ ತೋಟಗಳು ತುಂಗಭದ್ರೆಯ ಒಡಲಿನಲ್ಲಿ ಸ್ವಾಹಾ ಆಗಿದ್ದು ರೈತರು ತುಂಗಭದ್ರೆ ಅವತಾರಕ್ಕೆ ಕಣ್ಣೀರು ಹಾಕುವಂತಾಗಿದೆ.
ತುಂಗಭದ್ರಾ ನದಿಯ ಎಡದಂಡೆ ಮತ್ತು ಬಲದಂಡೆ ಭಾಗದಲ್ಲಿ ಇರುವ ಸಾವಿರಾರುಎಕೆರೆ ಜಮೀನುಗಳಲ್ಲಿ ನೀರು ತುಂಬಿ ಬೆಳೆಗಳು ಗೀಡಾಗಿವೆ. ಇದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತುಂಗಭದ್ರಾ ನದಿಗೆ ಪ್ರತಿನಿತ್ಯ ಭದ್ರಾ ಜಲಾಶಯದಿಂದ ನೀರು ಹರಿ ಬಿಡುತ್ತಿರುವುದರಿಂದ ಪ್ರವಾಹದ ಮಟ್ಟ ಹೆಚ್ಚುತ್ತಲೆ ಇದೆ . ಈ ಕುರಿತಂತೆ ಇಟಗಿ ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯ ಅಶೋಕ ಹಳ್ಳೆಪ್ಪನವರ್ ಪ್ರತಿಕ್ರಿಯೆ ನೀಡಿ ದಿನದಿಂದ ದಿನಕ್ಕೆ ನದಿಯ ನೀರು ಹೆಚ್ಚುತ್ತಿರುವುದರಿಂದ ಈಗಾಗಲೇ ಬೆಳೆದು ನಿಂತಿದ್ದ ಭತ್ತ ಗೋವಿನ ಜೋಳ ನೀರು ಪಾಲಾಗಿದ್ದು ಸರ್ಕಾರ ಈ ಕೂಡಲೇ ಸಮೀಕ್ಷೆ ಮಾಡಿ ರೈತರಿಗೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.