ಬೀಳ್ಕೊಡುಗೆ ಕಾರ್ಯಕ್ರಮ
ಹುಬ್ಬಳ್ಳಿ,ಆ.೨: ಪ್ರಯಾಣಿಕ ಸ್ನೇಹಿ ವರ್ತನೆಯ ಮೂಲಕ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಗ್ಗೆ ಸದಭಿಪ್ರಾಯ ಹೆಚ್ಚಾಗುವಂತೆ ಸಾರಿಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ಕಚೇರಿ, ೧,೨ ಮತ್ತು ೩ನೇ ಘಟಕ ಹಾಗೂ ಹೊಸೂರು ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ನಿವೃತ್ತ ನೌಕರರ ಬೀಳ್ಕೊಡುಗೆ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದರು.
ಕರ್ತವ್ಯದ ಸಮಯದಲ್ಲಿ ಅನಾವಶ್ಯಕವಾಗಿ ಮೊಬೈಲ್ ಬಳಸುವುದು, ರೀಲ್ಸ್ ಮಾಡುವುದು ಅನಾಹುತಗಳನ್ನು ನಾವಾಗಿಯೇ ಮೈಮೇಲೆ ಎಳೆದುಕೊಂಡAತಾಗುತ್ತದೆ. ಅಂತಹ ನೌಕರರ ಮೇಲೆ ಕಠಿಣ ಶಿಶ್ತಿನ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
೭ ಚಾಲಕರು, ಇಬ್ಬರು ನಿರ್ವಾಹಕರು, ೪ ತಾಂತ್ರಿಕ ಸಿಬ್ಬಂದಿ, ೫ ಸಂಚಾರ ನಿಯಂತ್ರಕರು ಹಾಗೂ ಇಬ್ಬರು ಸಹಾಯಕ ಸಂಚಾರ ನಿರೀಕ್ಷಕರು ಸೇರಿದಂತೆ ಒಟ್ಟು ೨೦ ನಿವೃತ್ತ ನೌಕರರಿಗೆ ಆತ್ಮೀಯವಾಗಿ ಗೌರವಿಸಿ ಬೀಳ್ಕೊಡಲಾಯಿತು.