ರಸ್ತೆ ದುರಸ್ತಿಗೆ ಆಗ್ರಹ
ಚನ್ನಮ್ಮನ ಕಿತ್ತೂರು,ಆ೨: ಒಂದೆಡೆ ಜೆಜಿಎಂ ಯೋಜನೆ ಜನರಲ್ಲಿ ಸಂತಸ ತಂದಿದ್ದು. ಮತ್ತೊಂದೆಡೆ ಗ್ರಾಮಗಳಲ್ಲಿ ಪೈಪ್‌ಲೈನ್ ಅಗೆದು ತಗ್ಗು-ಗುಂಡಿಗಳಿAದ ರಸ್ತೆಗಳು ಹಾಳಾಗಿ ಜನರು ಪರದಾಡುವಂತಾಗಿದೆ.
ಕಿತ್ತೂರದಿಂದ ಬೀಡಿ ಕ್ರಾಸ್ ಮಾರ್ಗವಾಗಿ ಖಾನಾಪೂರ-ಗೋವಾ ಸೇರುವ ಮಾರ್ಗದ ಮಧ್ಯೆ ತಾಲೂಕಿನ ದೇಗಾಂವ, ಶಿರಗಾಪೂರ, ಹೊಸೂರ ಮಾರ್ಗವಾಗಿ ದೇಗುಲಹಳ್ಳಿ ಸಂಪರ್ಕಿಸುವ ರಸ್ತೆ ಇದಾಗಿದ್ದು ರಸ್ತೆಯಲ್ಲಿ ಗುಂಡಿಗಳೋ ಅಥವಾ ಗುಂಡಿಗಳ ಮಧ್ಯೆ ರಸ್ತೆಯೋ ಎಂಬ ಪ್ರಶ್ನೆ ಇಲ್ಲಿ ಸಂಚರಿಸುವ ಸಾರ್ವಜನಿಕರನ್ನು ಕಾಡುತ್ತಿದೆ.
ಗ್ರಾಮದಲ್ಲಿಯ ಶಾಲಾ ಮಕ್ಕಳು, ಹೊಲ-ಗದ್ದೆಗಳಿಗೆ ತಮ್ಮ ದಿನನಿತ್ಯದ ಕೆಲಸಕ್ಕೆ ಸಂಚರಿಸುವ ರೈತರು, ಸಾರ್ವಜನಿಕರು ಇನ್ನು ಹಲವಾರು ಕೆಲಸ ಕಾರ್ಯಗಳಿಗೆ ಸಾಗಲು ಈ ರಸ್ತೆ ಮುಖ್ಯ ರಸ್ತೆಯಾದ್ದರಿಂದ ಇಲ್ಲಿಯೇ ಹಾಯ್ದುಹೋಗಬೇಕಾಗಿದ್ದು ರಸ್ತೆ ತೀರಾ ಹದಗೆಟ್ಟದ್ದರಿಂದ ಬೈಕ್-ವಾಹನ ಸವಾರರು ಹಗ್ಗದ ಮೇಲೆ ಡೊಂಬರಾಟ ಮಾಡಿ ಸಾಗುವಂತಾಗಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿರುತ್ತದೆ. ಸಂಬAಧಪಟ್ಟ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿದರೆ ಮಳೆಗಾಲ ಮುಗಿಯಲಿ ನಂತರ ದುರಸ್ತಿಗೊಳಿಸಲಾಗುವುದೆಂದು ಹೇಳಿ ಕೈತೊಳೆದುಕೊಳ್ಳುತ್ತಾರೆ. ಅಧಿಕಾರಿಗಳ ನಡೆ ಜನರಿಗೆ ಬೇಸರ ತಂದಿದ್ದು ಜೀವಕ್ಕೆ ಆಪತ್ತು ಎದುರಾಗುವ ಮುನ್ನ ರಸ್ತೆ ರಿಪೇರಿ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿರುವುದು ಅತ್ಯವಶ್ಯವಾಗಿದೆ.
ಈ ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಲು ಬೈಕ್-ವಾಹನ ಸವಾರರು ಹರಸಾಹಸ ಪಡುವ ಸಂದAರ್ಭದಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದ್ದು ಎಷ್ಟೋ ಉದಾಹರಣೆಗಳಿವೆ. ಆದ್ದರಿಂದ ಆದಷ್ಟು ಬೇಗನೇ ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕೆಂದು ಗ್ರಾಪಂ ಅಧ್ಯಕ್ಷೆ ಶ್ರೀಮತಿ ಮಲ್ಲವ್ವ .ಶಂ. ನಾವಲಗಟ್ಟಿ, ಉಪಾಧ್ಯಕ್ಷೆ ಶ್ರೀಮತಿ ರೇಣುಕಾ .ರ. ಮಡಿವಾಳರ, ಗ್ರಾಪಂ ಸದಸ್ಯರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.