ಗಂಗರ ಆಳ್ವಿಕೆ ಶಾಸನ ಪತ್ತೆ
ಕೋಲಾರ,ಆ. ೨-ಗಂಗರ ಆಳ್ವಿಕೆಯಲ್ಲಿ ಕೋಲಾರ ( ಕೋಲಾಹಲಪುರ) ಹೊರವಲಯದಲ್ಲಿನ ನಡುಪಳ್ಳಿ ಗ್ರಾಮದಲ್ಲಿ ಕಂಬ ಶಾಸನವೊಂದು ಪತ್ತೆಯಾಗಿದೆ. ಗ್ರಾಮದವರೇ ಅಗಿರುವ ಎನ್.ಗೋವಿಂದಪ್ಪನವರ (ಅದಿಮ) ಗಮನಕ್ಕೆ ಈ ವಿಷಯವು ಬಂದು ಅವರ ಮನವಿ ಮೇರೆಗೆ ನಿವೃತ್ತ ಕನ್ನಡ ಉಪನ್ಯಾಸಕರು ಹಾಗೂ ಶಾಸನ ತಜ್ಞ ಕೆ.ಆರ್.ನರಸಿಂಹನ್ ಅವರು ಪರಿಶೀಲಿಸಿದರು.
ಗಂಗರ ಕಾಲದ ಕಲ್ಲಿನ ಕಂಬದಲ್ಲಿ ಕೆತ್ತಲಾಗಿರುವ ಶಾಸನವೆಂದು ಗುರುತಿಸಲಾಗಿದೆ. ಇದನ್ನು ಪ್ರಸಕ್ತ ಸಾಲಿನಲ್ಲಿ ಕೋಲಾರ ಜಿಲ್ಲೆಯ ಶಾಸನ ಸಂಪುಟಕ್ಕೆ ನೂತನವಾಗಿ ಸೇರ್ಪಡೆ ಮಾಡಲು ಸಾಧ್ಯವಾಗಿದೆ,
ಶಾಸನದ ಸಂದೇಶ-
ಈ ಶಾಸನದ ಸಂದೇಶ ಏನೆಂದರೆ ಸ್ಥಳೀಯರು ವೇಣುಗೋಪಾಲನೆಂದು ಕರೆದು ಆರಾಧಿಸುತ್ತಿರುವ ಬೃಂದವನದ ಮುಂದೆ ಇರುವ ಶಿಲಾಸ್ತಂಭದ ಜಗುಲಿಯ ಒಂದು ಭಾಗದ ಕಲ್ಲಿನ ಮೇಲೆ ಎಂಟು ಸಾಲುಗಳ ಕನ್ನಡದ ಲಿಪಿಯಲ್ಲಿ ( ಅಗಿನ ಕನ್ನಡ ಭಾಷೆ )ಶಾಸನವನ್ನು ಕೆತ್ತಲಾಗಿದೆ.
ಕಂಬದ ಮೇಲೆ ವೈಷ್ಣವ ಲಾಂಛನಗಳಾದ ಶಂಖ-ಚಕ್ರಗಳು, ಮೂರು ನಾಮ, ಗರುಡ, ಮತ್ತು ಅಂಜನೇಯನ ಉಬ್ಬುಗಳ ಶಿಲ್ಪಗಳು ಗೋಚರಿಸುತ್ತದೆ. ದೇವಾಲಯದ ಮುಂದೆ ಸಾಮಾನ್ಯವಾಗಿ ಇಂಥಹ ಕಂಬಗಳಿದ್ದು, ಅವು ಶೈವ ಪಂಥದ್ದಾದಗಿದ್ದರೆ ತ್ರಿಶೋಲ, ಡಮುರುಗ, ನಂದಿಯ ಶಿಲ್ಪಗಳಿಂದ ಕೊಡಿರ ಬೇಕಾಗಿತ್ತು ಅದರೆ ಇಲ್ಲಿರುವ ಕಲ್ಲಿನಶಿಲೆಗಳಲ್ಲಿ ವೈಷ್ಣವ ಪಂಥಕ್ಕೆ ಸೇರಿದ್ದಾಗಿದೆ ಎಂಬುವುದನ್ನು ಚಿತ್ರಗಳನ್ನು ಕೆತ್ತಿರುವುದರಿಂದ ಸ್ವಷ್ಟವಾಗಿದ್ದರೆ, ಶಾಸನದ ಸಂದೇಶವು ಸಹ ಇದನ್ನೆ ದೃಢಿಕರಿಸುತ್ತದೆ.
ಶಾಸನ ಸಂದೇಶದ ಮಾಹಿತಿಯು ಪೂರ್ಣವಾಗಿ ಪತ್ತೆಯಾಗಿದ್ದು ಅದರ ವಿವರ ಇಂತಿದೆ-
ಸ್ವಸ್ತಿ ಶ್ರೀ ಶಕವರುಷ
೧೩೬೪ನೇ ಮೇಲೆನ
ಲುವ ದುಂದುಭಿ ಸಂ
ವತ್ಸರದ ಕಾರ್ತಿಕ ಸುಂ
ಶು ಆರ್ಕಸಾಲೆಭಾಮೋಜ
ನ ಮಗ ಮಾರಸೂಳೆ ತಿರುಮಲೆದೇ
ವರಿಗೆ ಕಂಭಪ್ರತಿಷ್ಠೆಯಮಾಡಿದ
ಸೇವೆ ಮಂಗಳಮಹಾ ಶ್ರೀ ಶ್ರೀ ಶ್ರೀ
ಶಾಸನದ ಕೆತ್ತನೆಯ ಪ್ರತಿ ಸಾಲಿನಲ್ಲಿ ೦ ಹಾಕಿದ್ದಾರೆ. ಶಾಸನದಲ್ಲಿ ಯಾವ ಕಾಲದ ಉಲ್ಲೇಖವೆಂದು ಸ್ವಷ್ಟವಾಗಿದೆ.ಇದನ್ನು ಕ್ರಿಸ್ತಶಕ ೧೪೪೨ರ ಅಕ್ಟೋಬರ್ ೪ನೇ ದಿನಾಂಕದ ಶುಕ್ರವಾರದಂದು ತಿಳಿದು ಬರಲಿದೆ.ಬಹುಪಾಲು ಇದು ಇಲ್ಲಿನ ಬೃಂದನವನ ರೂಪಿ ತಿರುಮಲೆಯ ದೇವರಾಗಿರಬಹುದು. ಇಲ್ಲಿ ದೊಡ್ಡ ದೇವಾಲಯವೂ ನಿರ್ಮಾಣ ಅಗಿದ್ದರ ಬೇಕು ಎಂದು ಅರಿಯ ಬಹುದಾಗಿದೆ.
ಕಾಲಾಂತರದಲ್ಲಾದ ಪರಿವರ್ತನೆಯಿಂದಾಗಿ ಇದು ವೇಣು ಗೋಪಾಲ ಸ್ವಾಮಿಯೆಂದು ಕರೆಸಿ ಕೊಳ್ಳುತ್ತದೆ. ತಿರುಪತಿ ತಿರುಮಲೆಗಳಿಗೆ ಸಮೀಪದಲ್ಲಿರುವ ಕಾರಣ ಕೋಲಾರ ಜಿಲ್ಲೆಯಲ್ಲಿ ಇಂಥಹ ಹಲವಾರು ಬೃಂದಾವನ ರೂಪಿ ತಿಮ್ಮಪ್ಪನನ್ನು ನಾವಿಂದು ಕಾಣುತ್ತಿದ್ದೇವೆ. ಇದನ್ನು ಸಂರಕ್ಷಿಸ ಬೇಕಾಗಿರುವುದು ಅನಿವಾರ್ಯವಾಗಿದೆ.
ಕ್ಷೇತ್ರ ಕಾರ್ಯಕ್ಕೆ ನೆರವಾದ ನಡುಪಲ್ಲಿ ಗ್ರಾಮ ಎನ್.ಗೋವಿಂದಪ್ಪ, ಕೆ.ಧನಪಾಲ್, ಡಾ. ವಿಜಯ ಕುಮಾರ್ ಮತ್ತು ಗ್ರಾಮಸ್ಥರಿಗೆ ಶಾಸನ ತಜ್ಞ ಪ್ರೋ, ಕೆ.ಆರ್.ನರಸಿಂಹನ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.