ಜನಪರ ಕೆಲಸಗಳಿಗೆ ಅಡ್ಡಿ ಪಡಿಸದಿರಿ
ಕೋಲಾರ,ಆ.೨:ರಾಜ್ಯದಲ್ಲಿ ಪ್ರವಾಹದ ಸಂಕಷ್ಟ ಪರಿಸ್ಥಿತಿ ಬಿಗಡಾಯಿಸಿದ್ದು ಕೆಲವು ಭಾಗದ ಜನರು ಭಾರಿ ತೊಂದರೆಗೆ ಸಿಲುಕಿದ್ದಾರೆ. ಸಾವು ನೋವುಗಳಾಗಿದೆ. ಪ್ರಥಮವಾಗಿ ಅವರನ್ನು ಸಂರಕ್ಷಿಸಿ, ಆ ಪ್ರದೇಶದ ಜನರ ಸಮಸ್ಯೆ, ತೊಂದರೆಗಳನ್ನು ಬಗೆಹರಿಸಿ ಮೂಲಭೂತ ಸೌಲಭ್ಯಗಳನ್ನು ಬೇಕಾಗಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ಸದಸ್ಯರು ಆಡಳಿತ ಸರ್ಕಾರಕ್ಕೆ ಸಹಕಾರ ನೀಡುವ ಮೂಲಕ ಮಾನವೀಯತೆ ತೋರುವಂತ ಕೆಲಸ ಮಾಡಲಿ, ಅದನ್ನು ಬಿಟ್ಟು ಮೈಸೂರಿಗೆ ಪಾದಯಾತ್ರೆ ಪ್ರತಿಭಟನೆಗಳು ಹಮ್ಮಿ ಕೊಂಡಿರುವುದು ಸಮಂಜಸವಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಪಾದಿಸಿದರು,
ನಗರದಲ್ಲಿ ಕುಡಾ ಕಚೇರಿಯಲ್ಲಿ ಮಾದ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಅವರು ಮಾತನಾಡಿ ತುರ್ತು ಕೆಲಸಗಳಿಗೆ ಸಹಕಾರ ನೀಡುವುದು ಬಿಟ್ಟು ಅಡ್ಡಿ ಪಡೆಸುತ್ತಿರುವುದು ಸರಿಯಲ್ಲ ತುರ್ತು ಕೆಲಸಗಳನ್ನು ನಿರ್ವಹಿಸಲು ಅದ್ಯತೆ ನೀಡಬೇಕಾಗಿರುವುದು ಆಡಳಿತರೊಢ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಕೇಂದ್ರ ಸರ್ಕಾರವು ನಮ್ಮ ಕೋಲಾರ ಜಿಲ್ಲೆಗೆ ಏನು ಮಾಡುವುದು ಬೇಡಾ ಯಾವೊಂದು ಅಭಿವೃದ್ದಿ ಕೆಲಸಗಳು ಬಂದಿಲ್ಲ. ಅದು ಬರುವಂತ ವಿಶ್ವಾಸವು ನಮಗಿಲ್ಲ, ನಮ್ಮ ಜಿಲ್ಲೆಯ ಅಭಿವೃದ್ದಿಯನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದ ಅವರು ಬಿಜೆಪಿ ಸದಸ್ಯರು ರಾಜ್ಯದಲ್ಲಿ ಕೇಂದ್ರದಿಂದ ಅಭಿವೃದ್ದಿ ಕೆಲಸಗಳನ್ನು ತರಲು ಒತ್ತಡ ಹೇರ ಬೇಕು. ಅದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು,
ಪ್ರಶ್ನೆಯೊಂದಕ್ಕೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಪತನವಾಗಲಿದೆ ಎಂಬುವುದು ಬಿಜೆಪಿಗರ ಕನಸು ಅಷ್ಟೆ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದು ಹುಸಿಯಾಗಿದೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು,
ಕುಮಾರ ಸ್ವಾಮಿಯವರಿಗೆ ಬಿಜೆಪಿಯವರ ಪಾದಯಾತ್ರೆ ಗಮನಕ್ಕೆ ಬಂದಿರಲಿಲ್ಲವೇ ಅವರು ಸ್ವರ್ಧೆ ಮಾಡಿರುವ ಮಂಡ್ಯ ಕ್ಷೇತ್ರದ ಮೇಲೆಯೇ ಪಾದಯಾತ್ರೆ ಮಾಡುತ್ತಿದ್ದಾರೆ ಅವರಿಗೆ ತಿಳಿದಿಲ್ಲ ಎಂಬುವುದು ಹಾಸ್ಯಸ್ಪದವಾಗಲಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್. ಕುಡಾ ಮಾಜಿ ಅಧ್ಯಕ್ಷ ಅಬ್ದುಲ್Sಯೂಂ, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್,ಮೈಲಂಡಹಳ್ಳಿ ಮುರಳಿ ಮುಂತಾದವರು ಇದ್ದರು,