ಅರ್ಧಕ್ಕೆ ನಿಂತ ಗಾಂಧಿಭವನ ನಿರ್ಮಾಣದ ಕಾಮಗಾರಿ
ಕೋಲಾರ, ಆ. ೨- ಕೋಲಾರ ಜಿಲ್ಲಾಡಳಿತವೇ ಕಾನೂನು ಸುವ್ಯವಸ್ಥೆಗಳನ್ನು ಉಲ್ಲಂಘಿಸುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದೆದಂತ ಗಾದೆಯಂತೆ ಅಗಿದೆ.
ಸಾರ್ವಜನಿಕರ ಆಸ್ತಿಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೂ ಅದರ ಮೇಲೆ ಹಕ್ಕುಗಳು ಇರುವುದಿಲ್ಲ. ಅದನ್ನು ಪಡೆಯ ಬೇಕಾದರೆ ಕೆಲವೊಂದು ಕಾನೂನು ಕಟ್ಟಳೆಗಳನ್ನು ಪಾಲನೆ ಮಾಡಬೇಕಾಗಿದೆ ಅವುಗಳು ಏನೊಂದು ಪಾಲನೆ ಮಾಡದೆ ಅವೈಜ್ಞಾನಿಕವಾಗಿ ಸ್ವಾಧೀನಕ್ಕೆ ಪಡೆಯಲು ಮುಂದಾಗುವುದನ್ನು ಕಾನೂನು ಉಲ್ಲಂಟನೆಯೆಂದೆ ಪರಿಗಣಿಸ ಬೇಕಾಗಿದೆ.
ಇಂಥಹುದೊಂದು ಪ್ರಕರಣವು ನಗರದ ಹೃದಯದ ಭಾಗದಲ್ಲಿ ನಡೆದಿರುವುದು ಜಿಲ್ಲಾಡಳಿತದ ಬೇಜವಾಬ್ದಾರಿ ಆಡಳಿತದ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ
ನಗರದಿಂದ ಮುಳಬಾಗಿಲು ರಸ್ತೆಗೆ ಹೋಗುವ ಮಾರ್ಗದಲ್ಲಿ ಗಾಂಧಿನಗರ ಸಮೀಪದ ಕೋಲಾರಮ್ಮ ಕೆರೆಯ ಸೇತುವೆ ಕೆಳಭಾಗದ ಕೋಡಿ ಕಾಲುವೆಯಲ್ಲಿ ಗಾಂಧಿ ಭವನವನ್ನು ಕಳೆದ ೪ ವರ್ಷದ ಹಿಂದೆ ಸುಮಾರು ೩ ಕೋಟಿ ರೂ ವೆಚ್ಚದಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸಿತ್ತು. ಈ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು. ನಿರ್ಮಿತಿ ಕೇಂದ್ರವು ಸಹ ಹಿಂದೆ ಮುಂದೆ ನೋಡದೆ ಕಾಮಗಾರಿಯನ್ನು ಪ್ರಾರಂಭಿಸಿಯೇ ಬಿಟ್ಟಿತ್ತು,
ಈ ಸಂಬಂಧವಾಗಿ ನ್ಯಾಯಲಯದಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಹಂತದಲ್ಲಿದೆ ಅದರೆ ಕೋಡಿಯಲ್ಲಿ ಗಾಂಧಿಭವನ ನಿರ್ಮಾಣ ಮಾಡಲು ಮುಂದಾಗಿರುವುದ ಕಂಡರೆ ಇದು ಅಭಿವೃದ್ದಿ ಕಾಮಗಾರಿಯಾಗದೆ ಹಣವನ್ನು ಲಪಟಾಯಿಸುವ ಯೋಜನೆಯಾಗಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಅಲ್ಲವೇ ? ಈಗಾ ಉಂಟಾಗಿರುವ ಸಾರ್ವಜನಿಕರ ಹಣ ೭೦ ಲಕ್ಷ ರೂ ನಷ್ಟಕ್ಕೆ ಹೊಣೆಗಾರಿಗೆ ಯಾರು ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಸಂಬಂಧವಾಗಿ ಲೋಕಾಯುಕ್ತ ಅಥವಾ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಯ ಪ್ರಕರಣವೆಂದು ಪರಿಗಣಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆ ನಡೆಸ ಬೇಕೆಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.