ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ
ಕೋಲಾರ,ಆ.೨:ಅಹಿಂದ ಜನ ಸೇವಾ ಸಮಿತಿ ವತಿಯಿಂದ ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ೧೦೦೦ ಸಾವಿರ ವಿದ್ಯಾರ್ಥಿಗಳಿಂದ ೫೦ ಸಾವಿರ ಬೀಜದ ಉಂಡೆಗಳನ್ನೂ ನೆಡುವ ಕಾರ್ಯಕ್ರಮ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ನೆಡಸಲಾಯಿತು.
ಸಂಘಟನೆಯ ಅಧ್ಯಕ್ಷ ಸ್ಕಂದ ನವೀನ್ ಮಾತನಾಡಿ, ಬೀಜದ ಉಂಡೆಗಳನ್ನು ನಾಟುವುದರೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಆದರೆ, ನೋವಿನ ಸಂಗತಿ ಅಂದರೆ ನಾವೇ ಪರಿಸರ ನಾಶ ಮಾಡುತ್ತಿದ್ದೇವೆ ಆದ ಕಾರಣದಿಂದಲೇ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ ನಾವು ಪರಿಸರ ನಾಶ ಮಾಡದೆ ಇದ್ದಿದ್ದರೆ ಈ ಕಾರ್ಯಕ್ರಮವನ್ನು ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ ದಯವಿಟ್ಟು ಪ್ರತಿಯೊಬ್ಬರೂ ಆಚರಣೆಯ ಸಂದರ್ಭದಲ್ಲಿ ಒಂದೊಂದು ಗಿಡ ನೆಡಬೇಕು ಎಂದು ಹೇಳಿದರು.
ಜೆಡಿಎಸ್ ಮುಖಂಡ ಹಾಗೂ ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮೆಲ್ಲರ ತಾಯಿ ಪ್ರಕೃತಿಯ ಮಾತೆ ಸಾಲುಮರದ ತಿಮ್ಮಕ್ಕನವರನ್ನು ಸ್ಮರಿಸಿ ಅವರ ಹಾಗೆ ನಾವೆಲ್ಲರೂ ಆಗಬೇಕು ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರು ಮನೆಗೊಂದು ಮರ ಊರಿಗೊಂದು ವನ” ಎಂಬ ನಾಣ್ಣುಡಿಯಂತೆ ಅದರತ್ತ ಸಾಗಬೇಕಾಗಿದೆ, ಅಷ್ಟೇ ಅಲ್ಲದೆ ಪ್ರಕೃತಿಯನ್ನು ನಾವೇ ನಾಶ ಮಾಡುತ್ತಿದ್ದೇವೆ ಪ್ರಾಣಿ ಪಕ್ಷಿಗಳ ರಕ್ಷಣೆ, ಪ್ರಕೃತಿಯ ರಕ್ಷಣೆ ನಮ್ಮ ಹೊಣೆಯಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಸಿಯನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕೆ.ವಿ.ಗೌತಮ್ ಮಾತನಾಡಿ, ನಾವು ಪ್ರಕೃತಿಯ ಜೊತೆ ನಾನಾ ನೀನ ಎಂಬಂತೆ ಸಾಗುತ್ತಿದ್ದೇವೆ, ಕೆಲವು ಪ್ರಾಣಿ ಪಕ್ಷಿಗಳು ಕಾಣಸಿಗದಂತಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸ್ವಲ್ಪಮಟ್ಟಿಗೆ ಸುಧಾರಣೆ ಆಗಬಹುದು. ದೇಶದ ಪ್ರತಿಯೊಬ್ಬ ಪ್ರಜೆಯು ಈ ನಿಟ್ಟಿನಲ್ಲಿ ಹೆಚ್ಚಾಗಿ ಸಾಗಿದಾಗ ಮಾತ್ರ ಮುಂದಿನ ಪೀಳಿಗೆಗೆ ಬುನಾದಿ ಬುನಾದಿಯಾಗುತ್ತದೆ ಎಂದರು. ಕಾರ್ಯಕ್ರಮದ ಕೊನೆಯ ಹಂತದಲ್ಲಿ ಎಲ್ಲಾ ಮುಖಂಡರು ಮತ್ತು ವಿದ್ಯಾರ್ಥಿಗಳು ಸೇರಿ ೧೦ ವಿವಿಧ ಬಗೆಯ ಹಣ್ಣುಗಳ ಗಿಡಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಸಿ. ಪಿಯು ಕಾಲೇಜು, ನೂತನ ಸರ್ಕಾರಿ ಪಿಯು ಕಾಲೇಜು, ವಿದ್ಯಾಜ್ಯೋತಿ ಕಾಲೇಜು, ಸಹ್ಯಾದ್ರಿ ಕಾಲೇಜು, ಮಹಿಳಾ ಸಮಾಜ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ.ಎಸ್.ಗಣೇಶ್, ಮುಖಂಡರಾದ ವಿ.ಕೆ.ರಾಜೇಶ್, ಗಲ್‌ಪೇಟ್ ಸಂತೋಷ್, ತ್ಯಾಗರಾಜ್, ರಾಮಾಂಜಿನಪ್ಪ, ಶೇಷಾದ್ರಿ, ಶಿವಣ್ಣ, ನಾರಾಯಣಸ್ವಾಮಿ, ಶ್ರೀನಾಥ್, ಸಂಘಟನೆಯ ಪದಾಧಿಕಾರಿಗಳಾದ ರೆಡ್ಡಿ ಯಾದವ್, ಅರುಣ್ ಕುಮಾರ್, ಜಬಿವುಲ್ಲಾ ಖಾನ್, ಸೈಯದ್ ಫಿರ್ದೋಸ್, ಮುನಿರಾಜು, ಚಲಪತಿ, ಅನಿಲ್, ನದೀಮ್ ಪಾಷಾ, ಗೋವರ್ಧನ್, ದಿವಾಕರ್, ಆಕಾಶ್, ಸೀನಪ್ಪ, ಸುಬ್ರಮಣಿ, ಬೆಳ್ಳೂರ್ ಮಣಿ, ನವಾಜ್ ಪಾಷಾ, ಚೇತನ್ ಮುಂತಾದವರು ಉಪಸ್ಥಿತರಿದ್ದರು.