ನಾಳೆ ಪದವೀಧರರ ದಿನಾಚರಣೆ
ಸಂಜೆವಾಣಿ ನ್ಯೂಸ್
ಮೈಸೂರು:ಆ:02- ಗೋಕುಲಂ ಮೂರನೇ ಹಂತದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಪದವೀಧರ ದಿನಾಚರಣೆ ಇದೇ ಆ.3ರಂದು ಬೆಳಗ್ಗೆ 10ಕ್ಕೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾಚಾರ್ಯ ಡಾ.ಬಿ. ಸದಾಶಿವೇಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ.ಎಸ್. ವಿದ್ಯಾಶಂಕರ್ ಅತಿಥಿಗಳಾಗಿರುವರು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸುವರು. ಬಿ. ಶಿವಲಿಂಗಪ್ಪ, ಪಿ. ವಿಶ್ವನಾಥ್ ಉಪಸ್ಥಿತರಿರುವರೆಂದರು.
ಒಟ್ಟು 812 ವಿದ್ಯಾರ್ಥಿಗಳಿಗೆ ಈ ವೇಳೆ ಪದವಿ ಪ್ರದಾನ ಮಾಡಲಾಗುವುದು.; ಇವರಲ್ಲಿ 58 ಪ್ರತಿಭಾನ್ವಿತ ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ. ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‍ನ ಎಸ್. ಶ್ರೀನಿಧಿ ಕಾಲೇಜಿಗೇ ಟಾಪರ್ ಆಗಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಎ. ಭವಾನಿ ಅವರು ದತ್ತಿ ಬಹುಮಾನ ಸ್ವೀಕರಿಸಲಿದ್ದಾರೆಂದರು. ಡಾ. ಶೋಭಾ ಶಂಕರ್, ಡಾ. ಸುದೇವ್ ಹಾಜರಿದ್ದರು.