ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರು ಚಂದ್ರಮ್ಮ: ನಿಧನ
ಸಂಜೆವಾಣಿ ವಾರ್ತೆ
ಹನೂರು ಆ 2 :- ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ಚಂದ್ರಮ್ಮ ರವರು ಗುರುವಾರ ವಯೋಸಹಜವಾಗಿ ದೈವಾಧೀನರಾಗಿದ್ದಾರೆ.
ಮೃತರಿಗೆ ಒಬ್ಬ ಪುತ್ರಿ, ಒಬ್ಬ ಪುತ್ರ ಅಳಿಯ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3-00 ಗಂಟೆಗೆ ಇವರ ಸ್ವಂತ ಜಮೀನಿನಲ್ಲಿ ನೆರವೇರಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ನಿಧನಕ್ಕೆ ಮಾಜಿ ಶಾಸಕರುಗಳಾದ ಆರ್ ನರೇಂದ್ರ, ಪರಿಮಳ ನಾಗಪ್ಪ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನದ್ವನಿ ಬಿ ವೆಂಕಟೇಶ್,ಯುವ ಮುಖಂಡ ನಿಶಾಂತ್, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದತ್ತೇಶ್ ಕುಮಾರ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಪಟ್ಟಣ ಪಂಚಾಯಿತಿಯ ನೌಕರರು ಸಂತಾಪ ಸೂಚಿಸಿದ್ದಾರೆ.