ಚಾಲಕರ ಒಕ್ಕೂಟದಿಂದ ಡಿ.ಸಿ ಪಾಟೀಲ ಗೆ ಸನ್ಮಾನ
ಸಂಜೆವಾಣಿ ವಾರ್ತೆ
ಕೆಂಭಾವಿ: ಆ.೨:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ೨೦೨೪ ರ ಜಿಲ್ಲಾ ಉತ್ತಮ ವರದಿಗಾರ ಪ್ರಶಸ್ತಿಗೆ ಭಾಜನರಾದ ಕೆಂಭಾವಿ ಪಟ್ಟಣದ ವರದಿಗಾರ ಡಿ.ಸಿ.ಪಾಟೀಲ ಅವರಿಗೆ ಕರ್ನಾಟಕ ಚಾಲಕರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ಮಹಿಬೂಬ ದಫೇದಾರ, ಅಧ್ಯಕ್ಷ ಎಚ್.ಎಮ್.ಪಟೇಲ ಮಾಲಗತ್ತಿ, ವೀರೇಶ ಗುತ್ತೇದಾರ, ಮಲ್ಲಿಕಾರ್ಜುನ, ದೇವಿಂದ್ರ.ಎನ್, ಕೃಷ್ಣ, ನಾಗರಾಜ, ಶಾಂತಪ್ಪ, ಇಸ್ಮಾಯಿಲ್, ಅಶೋಕ, ದೇವು ಸೇರಿದಂತೆ ಅನೇಕರಿದ್ದರು.