ಭೂಸ್ವಾದೀನ್ ಹೆಚ್ಚುವರಿ ಪರಿಹಾರ ಪರಿಶೀಲನೆ
ಇಂಡಿ:ಆ.೨:ಪಟ್ಟಣದ ರೈಲು ನಿಲ್ದಾಣದ ಹತ್ತಿರ ಇರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾದೀನ ಕಚೇರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ವ್ಯವಸ್ಥಾಪಕ ಗಿಚ್ಚೆ ಮಾಧವ ವಿಠ್ಠಲರಾವ, ಉಪ ವ್ಯವಸ್ಥಾಪಕ ಶಬ್ಬೀರ ಗಂಟಿ ಮತ್ತು ವಿಶೇಷ ಭೂಸ್ವಾನ ಅಧಿಕಾರಿ ಅಬೀದ್ ಗದ್ಯಾಳ ಬೇಟಿ ನೀಡಿದರು.
ಭೂ ಸ್ವಾಧೀನ ಕಾಯ್ದೆ ೧೮೯೪ ರ ಕಲಂ ೨೮ ( ಎ) ರಡಿ ಹಾಗೂ ಭೂಸ್ವಾಧೀನ ಕಾಯ್ದೆ ೨೦೧೩ ರ ಕಲಂ ೭೩ ರಡಿ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಪರಿಹಾರ ಮೊತ್ತದ ಪುನರ್ ನಿರ್ಧಾರ ಪ್ರಕರಣಗಳ ಬಗ್ಗೆ ಪರಿಶೀಲಿಸಿದರು.
ರೈತರು ಈಗಾಗಲೇ ತಾಲೂಕಿನ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರು ಮತ್ತು ಹಣ ಪಡೆದವರು ತಮ್ಮ ಜಮೀನಿಗೆ ಇನ್ನು ಹೆಚ್ಚಿನ ಪರಿಹಾರ ನೀಡಬೇಕು ಎಂದು ಕೋರ್ಟಿಗೆ ಮೊರೆ ಹೋದವರು ಮತ್ತು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದು ಎಷ್ಟು ಕೇಸುಗಳು ಇವೆ. ಮತ್ತು ಆ ಜಮೀನಿನ ಕಿಮ್ಮತ್ತು ಎಷ್ಟಾಗಬಹುದು ಎಂಬುದನ್ನು ಪರಿಸೀಲನೆ ಮಾಡಿದರು.
ಮತ್ತು ಕಚೇರಿಯಲ್ಲಿ ಇರುವ ಭೂ ಸ್ವಾದೀನ ಅರ್ಜಿಗಳು, ಹಣ ಬರದೇ ಇದ್ದವರು, ನೋಟಿಸ ನೀಡಿದವರ, ನೋಟಿಸು ನೀಡಬೇಕಾದವರÀ ಜಮೀನಿನ ಕುರಿತು ಪರಿಶೀಲಿಸಿದರು.
ಹೆಚ್ಚುವರಿ ಪರಿಹಾರಕ್ಕೆ ಕೋರ್ಟು ಹೋದ ರೈತರ ಕೇಸುಗಳನ್ನು ಪರಿಶೀಲಿಸಿದರು.
ನಂತರ ಇಂಡಿ ಶಾಖಾ ಕಾಲುವೆ ಪರಿವೀಕ್ಷಣೆ ಮಾಡಲು ಅಹಿರಸಂಗ ಗ್ರಾಮಗಳಲ್ಲಿ ಬರುವ ಕಾಲುವೆಯ ಸ್ಥಳ ವೀಕ್ಷಣೆ ಮಾಡಿದರು.
ಇಂಡಿ ತಾಲೂಕಿನ ಅಗಸನಾಳದಲ್ಲಿ ಬರುವ ೧೬ ಕೆರೆಗಳ ತುಂಬುವ ಜ್ಯಾಕವೆಲ್ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ವೀಕ್ಷಿಸಿದರು.
ಕಛೇರಿಯ ಎಲ್ಲ ಸಿಬ್ಬಂದಿಗೆ ರೈತರಿಗೆ ಭೂ ಸ್ವಾದೀನದಲ್ಲಿ ಬರುವ ಹಣದ ಮತ್ತು ಬೇಗನೆ ಪೂರೈಸಲು ತಿಳಿಸಿದರು.
ವಿ.ಜಿ.ಮಸಳಿ,ಎಸ್.ಸಿ.ಬಿರಾದಾರ, ಎಸ್.ಕೆ.ಕವಿಶೆಟ್ಟಿ, ಜೆ.ಎಂ.ಬೊರಾಮಣಿ ಮತ್ತಿತರಿದ್ದರು.