ಗುಡ್ಡಾಪೂರದಲ್ಲಿ ಕರ್ನಾಟಕ ಭವನ ಲೋಕಾರ್ಪಣೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨:ಮಹಾರಾಷ್ಟç ರಾಜ್ಯದ ಸಾಂಗಲಿ ಜಿಲ್ಲೆ ಜತ್ತ ತಾಲೂಕಿನ ಸುಕ್ಷೇತ್ರ ಗುಡ್ಡಾಪುರದಲ್ಲಿ ದೇವಾಲಯದ ಎರಡು ಎಕರೆ ಬಯಲು ಜಾಗದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಮುಜರಾಯಿ ಖಾತೆಯಿಂದ ಕಳೆದ ಸರ್ಕಾರದಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆಯªಪ್ರಯತ್ನದಿಂದ ಬಿಡುಗಡೆಯಾದ ಹನ್ನೊಂದು ಕೋಟಿ ರೂಪಾಯಿ ಅನುದಾನದಲ್ಲಿ ೯ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ” ಕರ್ನಾಟಕ ಭವನ” ಉದ್ಘಾಟನಾ ಕಾರ್ಯಕ್ರಮ ಗುರುವಾರ ಸುಕ್ಷೇತ್ರ ಗುಡ್ಡಾಪೂರದಲ್ಲಿ ನೆರವೇರಿತು.
ಟ್ರಸ್ಟ್ ಕಮಿಟಿ ಅಧ್ಯಕ್ಷ ವಿಜಯಕುಮಾರ ಪಾಟೀಲ ವೇದಿಕೆಯಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜುಗೌಡ ಅವರು, ೧೨ನೇ ಶತಮಾನದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಹಾಗೂ ಹಲವಾರು ಶರಣರ ಕಾಲಘಟ್ಟದಲ್ಲಿ ವರದಾನಿ ದಾನಮ್ಮ ದೇವಿ ಅನ್ನಸಂತರ್ಪಣೆಯ ಮಾಡುವ ಹಲವಾರು ಪವಾಡಗಳು ಮಾಡಿ ಭಕ್ತರ ಸಂರಕ್ಷಣೆ ಮಾಡಿರುವ ಶ್ರೀ ದಾನಮ್ಮ ದೇವಿ ದೇವಸ್ಥಾನ ಇದಾಗಿದೆ. ಸುಕ್ಷೇತ್ರವು ಇನ್ನೂ ಅಭಿವೃದ್ಧಿಯಾಗಬೇಕಾಗಿತ್ತು ಮಹಾರಾಷ್ಟ್ರ ಸರಕಾರ ಇತ್ತ ಕಡೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದಿಲ್ಲ. ಕರ್ನಾಟಕ ಮಹಾರಾಷ್ಟ್ರ ಸುತ್ತಲಿನ ರಾಜ್ಯದ ಭಕ್ತಾದಿಗಳು ಹೆಚ್ಚಾಗಿ ಇರುವುದರಿಂದ ಕರ್ನಾಟಕದ ಭಕ್ತಾದಿಗಳೇ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.ಇನ್ನು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಎಲ್ಲರೂ ಹೆಚ್ಚಿನ ಭಕ್ತಾದಿಗಳು ಗಮನಹರಿಸಬೇಕಾಗಿದೆ ಎಂದು ಹೇಳಿದರು.
ಮುಗಳಕೋಡ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಶ್ರೀ ಮಠಕ್ಕೆ ಆಗಮಿಸಿದವರ ಭಕ್ತರಿಂದ ಹಾರು ತುರಾಯುಗಳನ್ನು ತರಬೇಡಿ ಅಣ್ಣ ದಾಸೋಹಕ್ಕಾಗಿ ಅಕ್ಕಿ ಇನ್ನಿತರ ಸಾಮಗ್ರಿಗಳ ತೆಗೆದುಕೊಂಡು ಬನ್ನಿ. ಬಡ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಅನ್ನ ಸಂತರ್ಪಣೆಗೆ ನಿಮ್ಮ ಸೇವೆ ಆಗಲಿ ಎಂದು ಈಗಾಗಲೇ ಹೇಳಿರುವೆ. ಜಿಡಗಾ ಮಠದ ಹತ್ತಿರ ೧೮೦ ಎಕರೆ ಜಮೀನದಲ್ಲಿ ಎರಡು ನೂರು ಕೋಟಿ ಖರ್ಚು ಮಾಡಿ ಒಂದು ಒಂದು ಕೆರೆಯನ್ನು ಕಟ್ಟುವ ಕೆಲಸವನ್ನು ಪ್ರಾರಂಭಿಸಿರುತ್ತೇವೆ. ಸುಮಾರು ಮೂರು ಸಾವಿರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಆಶೀರ್ವಚನದಲ್ಲಿ ಹೇಳಿದರು.
ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಕರ್ನಾಟಕ ಸರ್ಕಾರದಲ್ಲಿ ಸಚಿವೆಯಾಗಿ ಪ್ರಮಾಣವಚರ ಸ್ವೀಕರಿಸಿದ ನಂತರ ನಾನು ಶ್ರೀ ದಾನಮ್ಮ ದೇವಿಯ ಹಾಗೂ ಎಲ್ಲಾ ಸುಕ್ಷೇತ್ರಗಳ ಆಶೀರ್ವಾದದಿಂದ ನನಗೆ ಬಂದ ಅಧಿಕಾರದಲ್ಲಿ ಪ್ರಪ್ರಥಮವಾಗಿ ಮುಖ್ಯಮಂತ್ರಿಗಳವರ ನೇತೃತ್ವದಲ್ಲಿ ೧೧ ಕೋಟಿ ರೂಪಾಯಿಗಳ ಇಲ್ಲಿನ ಕಮಿಟಿಯ ಭಕ್ತರ ಆಶಯದಂತೆ ನೀಡುವ ಅವಕಾಶ ನನಗೆ ಸಿಕ್ಕಿತು. ಕರ್ನಾಟಕ ರಾಜ್ಯದಿಂದ ಎಲ್ಲೆಲ್ಲಿ ಭಕ್ತಾದಿಗಳು ಸುಕ್ಷೇತ್ರ ಪಂಢರಪುರಕ್ಕೆ ಹಾಗೂ ತುಳಜಾಪುರ, ಶ್ರೀಶೈಲ ಹೀಗೆ ಹಲವಾರು ಸುಕ್ಷೇತ್ರಗಳಿಗೆ ನಮ್ಮ ಕೈಲಾದ ಮಟ್ಟಿಗೆ ಕಾರ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಚಿಕ್ಕಮಂಗಳೂರಿನ ಶ್ರೀ ದತ್ತ ಆಶ್ರಮ ಕೊಪ್ಪದ ಅವಧೂತ ವಿನಯ ಗುರೂಜಿ ಸಾನ್ನಿಧ್ಯ ವಹಿಸಿ ಸುಕ್ಷೇತ್ರ ಪಂಢÀರಪುರದಲ್ಲಿ ಭಗವಂತನು ಇಟ್ಟಂಗಿಯ ಮೇಲೆ ನಿಂತು ನಮಗೆ ದರ್ಶನ ನೀಡಿದರೆ ಶ್ರೀ ದಾನಮ್ಮ ದೇವಿಯು ಅಂಗೈಯಲ್ಲಿ ಲಿಂಗವನ್ನು ಹಿಡಿದು ಪೂಜೆ ಮಾಡುತ್ತಾ ನಮಗೆಲ್ಲ ದರ್ಶನ ನೀಡುತ್ತಾಳೆ. ಇಂದು ಸುಕ್ಷೇತ್ರವನ್ನು ನೋಡಿ ನನಗೆ ಆನಂದವಾಯಿತು ಎಂದು ಹೇಳಿದರು.
ಬಬಲೇಶ್ವರದ ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿದರು. ಗುಡ್ಡಾಪುರದ ಶ್ರೀ ಗುರುಪಾದ ಶಿವಾಚಾರ್ಯರು. ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ ಹಾಗೂ ಮಾಜಿ ಶಾಸಕ ವಿಲಾಸರಾವ್ ಜಗತಾಪ ವೇದಿಕೆ ಮೇಲೆ ಇದ್ದರು.
ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ ( ಜತ್ತ,), ನಿರ್ದೇಶಕರಾದ ಸಿದ್ದಯ್ಯಾ ಹಿರೇಮಠ (ಸೊಲ್ಲಾಪುರ ), ಪ್ರಕಾಶ ಗಣಿ ( ತಿಕೋಟಾ), ಸದಾಶಿವ ಗುಡ್ಡೋಡಗಿ (ವಿಜಯಪುರ), ಶಂಭುಲಿAಗ ಮಮದಾಪುರ (ಅಥಣಿ), ಗಜೇಂದ್ರ ಕುಲ್ಲೊಳ್ಳಿ (ಮಿರಜ), ಸಾಗರ ಚಂಪಣ್ಣವರ ( ಜತ್ತ), ದಾನಪ್ಪ ಪೂಜಾರಿ (ಗುಡ್ಡಾಪುರ), ಮಲ್ಲಿಕಾರ್ಜುನ ಪೂಜಾರಿ (ಗುಡ್ಡಾಪುರ ), ವಿಠಲ ಪೂಜಾರಿ, ಹಿರಿಯ ಗಣ್ಯರು, ರಾಜಕೀಯ ಧುರೀಣರು, ಸರಕಾರಿ ಅಧಿಕಾರಿಗಳು, ಭಕ್ತ ಸಮೂಹ ಭಾಗವಹಿಸಿದ್ದರು.