ಮಹಾದೇವಪ್ಪ ರಾಂಪೂರೆಯವರ ೧೦೩ ಜನ್ಮ ದಿನದ ಆಚರಣೆ
ಬೀದರ :ಆ.೨: ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಮಹಾದೇವಪ್ಪ ರಾಂಪೂರೆಯವರ ಮೂರ್ತಿ ಪೂಜೆ, ಹಾಗೂ ಭಾವಚಿತ್ರದ ಪೂಜೆ ಮತ್ತು ಜ್ಯೋತಿ ಬೆಳಗುವುದರೊಂದಿಗೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಚಾಲನೆ ಕೊಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೈ ಐಡಿಯಲ್ಸ್, ಟೆಕ್ನಾಲಜೀಸ್ ಪ್ರೆöÊವೇಟ್ ಲಿಮಿಟೆಡ್ ಮತ್ತು ಆಂಪ್ಲಿಪಾಯ ಸಂಸ್ಥಾಪಕ ನಿರ್ದೇಶಕ ಶ್ರೀ ಸಚ್ಚಿದಾನಂದ್ ಚಿದ್ರೆ ಆಗಮಿಸಿ ಮಾತನಾಡುತ್ತಾ ಶ್ರೀ ಮಹಾದೇವಪ್ಪ ರಾಂಪೂರೆಯವರು ಈ ಹಿಂದುಳಿದ ಭಾಗದಲ್ಲಿ ಮಹಾವಿದ್ಯಾಲಯ ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳ ಬಾಳಿಗೆ ವಿದ್ಯಾಧಾನ ನೀಡಿ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಇಂದಿನ ವಿದ್ಯಾರ್ಥಿಗಳು, ಡಿಜಿಟಲ್ ಮಾರ್ಕೆಟೆಂಗ್ ಮತ್ತು ವೆಬ್ ಟೆಕ್ನಾಲಜಿಗಳಲ್ಲಿ ಇಂಟರ್ನ್ಶಿಪ್ ಮಾಡಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ಮಹಾದೇವಪ್ಪ ರಾಂಪೂರೆಯವರು ಉನ್ನತ ಶಿಕ್ಷಣಕ್ಕಾಗಿ ೧೯೫೮ರಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬಡವರಿಗೆ ವಿದ್ಯಾರ್ಜನೆ ಅಂದು ಬಹಳ ಕಷ್ಟವಾಗಿತ್ತು ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆಯಲು ಮಾರ್ಗದರ್ಶಕರಾದರು ಬ್ರಿಟಿಷ್‌ರ ವಿರುದ್ಧ ಚಳುವಳಿ ಹೋರಾಟ ಮಾಡುತ್ತಾ ಜನನಾಯಕರಾದ ಇವರ ರಾಜಕೀಯ ಗುರುಗಳು ಎಂ.ಎನ್. ರಾಯ ಅವರ ಮಾರ್ಗದರ್ಶನದಲ್ಲಿ ರಾಂಪೂರೆಯವರು ಅನೇಕ ಚಳುವಗಳಿಗಳಲ್ಲಿ ಭಾಗವಹಿಸಿದರು ಆದರು ಸಹ ಅವರ ಛಲ ಬಿಡದೆ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಹೀಗಾಗಿ ಅನೇಕ ಇತಿಹಾಸಕಾರರು ಅವರು ಮಾಡಿದ ಸೇವೆಯನ್ನು ಪರಿಗಣಿಸಿ ದಕ್ಷಿಣ ಭಾರತದ ಶಿಕ್ಷಣ ಶಿಲ್ಪಿ ಎಂದು ನುಡಿದರು ವಿದ್ಯಾರ್ಥಿಗಳು ಸಹ ಇವರ ಮಾರ್ಗದರ್ಶದಲ್ಲಿ ನಡೆಯಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಹೈದ್ರಾಬಾದ ಕರ್ನಾಟಕ ಹಿಂದುಳಿದ ಭಾಗದಲ್ಲಿ ವಿಶೇಷವಾಗಿ ನಮ್ಮ ಬೀದರ ಜಿಲ್ಲೆಗೆ ೧೯೬೦ರಲ್ಲಿ ನಮ್ಮ ಮಹಾವಿದ್ಯಾಲಯ ಸ್ಥಾಪಿಸಿ ಕಲಿಯಲು ಹೊರಹೋಗುವ ಪ್ರತಿಭೆಗಳನ್ನು ಇಲ್ಲಿಯೇ ನಿರ್ಮಾಣ ಮಾಡಲು ಅವಕಾಶ ಮಾಡಿದ ಮಹಾನ ಜೀವಿ ಇªರು ಸ್ಥಾಪಿಸಿರು ಶಿಕ್ಷಣ ಸಂಸ್ಥೆಯಲ್ಲಿ ಹಲವಾರು ಕುಟುಂಬಗಳು ಇಂದು ಸುಖವಾಗಿ ಜೀವನ ನಡೆಸುತ್ತಿದ್ದಾರೆ ಅವರ ಸ್ವಂತಕ್ಕಾಗಿ ಯಾವುದೇ ಆಸ್ತಿ ಮಾಡಿಕೊಳ್ಳದೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಸರ್ವಾಂಗಿಣ ಅಭಿವೃದ್ಧಿಗಾಗಿ ಶ್ರಮಿಸಿದರು, ಆದುದರಿಂದ ಇವರು ಕಲ್ಯಾಣ ಕರ್ನಾಟಕದ ದಿವ್ಯಜ್ಯೋತಿ ಶಿಕ್ಷಣ ಶಿಲ್ಪಿ, ಹುಟ್ಟು ಹೋರಾಟಗಾರ ಸ್ವಾತಂತ್ರö್ಯವೀರ ದೇಶಪ್ರೇಮಿ ಹಾಗೂ ಈ ಭಾಗದ ಮದನಮೋಹನ ಮಾಳವೀಯ ಎಂದು ಹೇಳಿರುವುದು ನಿಜಕ್ಕೂ ಸೂಕ್ತವಾಗಿದೆ ಇವರ ಆದರ್ಶ ಇಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗ ಮಾಡಿ ದೇಶ, ವಿದೇಶಗಳಲ್ಲಿ ನಮ್ಮ ಮಹಾವಿದ್ಯಾಲಯದ ಕೀರ್ತಿ ಹಾಗೂ ತಮ್ಮ ಪಾಲಕರ ಕೀರ್ತಿ ಹಾಗೂ ಗುರುಗಳ ಕೀರ್ತಿಯನ್ನು ಅಜರಾಮರಗೋಳಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಪೂಜ್ಯ ದಿವಗಂತ ಮಹಾದೇವಪ್ಪ ರಾಂಪೂರೆಯವರ ಜನ್ಮದಿನ ಪ್ರಯುಕ್ತ ಮಹಾವಿದ್ಯಾಲಯದ ಆವರಣದಲ್ಲಿ ಸಸಿ ನೆಡಲಾಯಿತು
ಕಾರ್ಯಕ್ರಮದ ವೇದಿಕೆಯ ಮೇಲೆ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪ ರಾಗಯವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ಶ್ರೀಮತಿ ಶೈಲಜಾ ಸಿದ್ಧವೀರ ಸ್ವಾಗತಿಸಿದರೆ, ಶ್ರೀಮತಿ ರೇಣುಕಾದೇವಿ ಸ್ವಾಮಿ ಸ್ವಾಗತ ಗೀತೆ ಹಾಡಿದರೆ, ಕು ನಾಗರಾಣಿ ಪಾಲಂ ನಿರೂಪಿಸದರೆ, ಶ್ರೀಮತಿ ಪೂಜಾ ಮಂಗಲಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.