ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಿಂದ ಎಚ್ ಐವಿ ಕುರಿತು ಜಾಗೃತಿ ಅಭಿಯಾನ
ಅಥಣಿ : ಸೆ.೩೦:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ,ತಾಲೂಕು ಆರೋಗ್ಯ ಇಲಾಖೆ , ಸಾರ್ವಜನಿಕ ಆಸ್ಪತ್ರೆ ಅಥಣಿ ಮತ್ತು ಎಸ್ ಎಸ್ ಎಮ್ ಎಸ್ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಹಯೋಗದಲ್ಲಿ ಅಥಣಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಎಚ್ ಐವಿ ಕುರಿತು ಜನಜಾಗೃತಿ ಮೂಡಿಸಲಾಯಿತು.
ಜನಜಾಗೃತಿ ಕಾರ್ಯಕ್ರಮವನ್ನು ಅಥಣಿ ತಾಲೂಕ ಆರೋಗ್ಯ ಅಧಿಕಾರಿ ಡಾ. ಬಸಗೌಡ ಕಾಗೆ ಉದ್ಘಾಟಿಸಿ ಮಾತನಾಡಿ ಏಡ್ಸ್, ಹೆಚ್‌ಐವಿ ಸೋಂಕಿನ ಕುರಿತು ಅರಿವು ಮೂಡಿಸುವುದು. ಮತ್ತು ಇದರಿಂದ ಹೇಗೆ ರಕ್ಷಣೆ ಪಡೆಯುವುದು, ಸುರಕ್ಷಿತವಾಗಿರಬೇಕು ಎನ್ನುವುದನ್ನು ತಿಳಿಸಿಕೊಡುವುದು ಬಹಳ ಅಗತ್ಯವಾಗಿದೆ. ಆದ್ದರಿಂದ ಪಟ್ಟಣದಲ್ಲಿ ಎಚ್ ಐವಿ ಕುರಿತು ಜಾಗೃತಿ ಮತ್ತು ಬೀದಿ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿರುವದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಅಥಣಿಯ ಬಸ್ ನಿಲ್ದಾಣದಲ್ಲಿ , ಬಸವೇಶ್ವರ ವೃತ್ತದಲ್ಲಿ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹತ್ತಿರ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮೇಲ್ವಿಚಾರಕ ಎಂ ಎಂ ಸನದಿ. ಸಾರಿಗೆ ಘಟಕದ ವ್ಯವಸ್ಥಾಪಕ ಎನ್ ಎಂ ಕೇರಿ, ಬಸವರಾಜ ಮುದಗೌಡ, ಶಂಕರಯ್ಯ ಮಠಪತಿ, ಹನುಮಂತ ವಣಜಕರ,
ಅಚ್ಯುತಾನಂದ ಕೆ ಎಂ. ಶಕ್ತಿ ಟಿ. ಆಯಾ ಸಂಸ್ಥೆ ಕಾರ್ಯಕರ್ತತರು ಭಾಗವಹಿಸಿದ್ದರು.