4ರಂದು ಸಮಾಧಾನದಲ್ಲಿ ವಿದ್ಯಾರ್ಥಿಗಳಿಗೆ ವಚನಗಳ ಸ್ಪರ್ಧೆ
ಕಲಬುರಗಿ:ಸೆ.29: ಮಕ್ಕಳಲ್ಲಿ ವಚನಗಳ ಮಹತ್ವ ಅರಿಯಲು ಹಾಗೂ ವ್ಯಕ್ತಿತ್ವ ವಿಕಸನ ನಿಟ್ಟಿನಲ್ಲಿ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ನೇತೃತ್ವದ ಸಮಾಧಾನದಲ್ಲಿ ಇದೇ ಅಕ್ಟೋಬರ್ 4 ರಂದು ಶಾಲಾ ಮಕ್ಕಳಿಗೆ ವಚನಗಳ ಸ್ಪರ್ಧೆ ಆಯೋಜಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಉತ್ತರ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ವಚನ ಸ್ಪರ್ಧೆ ಆಯೋಜಿಸಲಾಗಿದ್ದು, 5 ರಿಂದ 7ನೇ ತರಗತಿ ಹಾಗೂ 8 ರಿಂದ 10 ನೇ ತರಗತಿ ಎಂಬುದಾಗಿ ವಿಭಾಗ ಮಾಡಲಾಗಿದೆ.‌
ವಚನಗಳ ಸ್ಪರ್ಧೆಗೆ ಪ್ರತಿ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಿಂದ ತಲಾ ಒಬ್ಬರನ್ನು ಆಯ್ಕೆಗೊಳಿಸಿ ಅಕ್ಟೋಬರ್ 4ರಂದು ಬೆಳಿಗ್ಗೆ 10 ಕ್ಕೆ ಕಲಬುರಗಿ ನಗರದ ಅಟಲ್ ಬಿಹಾರಿ ವಾಜಪೇಯಿ ಕುಡಾ ಬಡಾವಣೆ ಪಕ್ಕದ ಸಮಾಧಾನದಲ್ಲಿ ಹಾಜರಿರುವಂತೆ ಕಳುಹಿಸಿ ಕೊಡಲು ಸಮಾಧಾನದ ಗುರುದೇವ ಸೇವಾ ಸಂಸ್ಥೆ ಶಾಲಾ‌ ಮುಖ್ಯೋಪಾಧ್ಯಾಯವರಲ್ಲಿ ಕೋರಿದೆ.
ಸಮಾಧಾನದ ಗುರುದೇವ ಸೇವಾ ಸಂಸ್ಥೆ ಹಾಗೂ ಚತುರಾ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ ಇವರ ವತಿಯಿಂದ ವಚನಗಳ ಸ್ಪರ್ಧೆ ಆಯೋಜಿಸಲಾಗಿದೆ.‌ ಪ್ರಮುಖವಾಗಿ
ವಚನಗಳ ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಅಲ್ಲದೇ ಇತರ ಸಮಾಧಾನಕಾರ ಬಹುಮಾನಗಳಿದ್ದು, ಸ್ಪರ್ಧೆಯಲ್ಲಿ ವಿಜೇತರಾಗುವ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಅಕ್ಟೋಬರ್ 12 ರಂದು ಕಲಬುರಗಿ ಸಮಾಧಾನದಲ್ಲಿ ಪೂಜ್ಯ ಮೌನ ಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಬಹುಮಾನ‌ ನೀಡಿ ಪುರಸ್ಕರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ವಚನಗಳ ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಪೆ ಅಂತೀಮವಾಗಿರುತ್ತದೆ.‌ ಹೆಚ್ಚಿನ ಮಾಹಿತಿಗಾಗಿ ಕುಮಾರಶೆಟ್ಟಿ 95389 88360, ಶರಣ ಪಾಟೀಲ್ 81233 07779,
ಶಿವರಾಯ 89712 93120
ಸಂದೀಪ ಪಾಟೀಲ್ 90366 35135, ಸಂಗನಗೌಡ ಪಾಟೀಲ್ 99020 56417 ಗೆ ಸಂಪರ್ಕಿಸಬಹುದಾಗಿದೆ.