ಯುವ ಪತ್ರಕರ್ತರಿಗೆ ಅಧ್ಯಯನಶೀಲತೆ ಬೇಕು
ಸಂಜೆವಾಣಿ ವಾರ್ತೆ
ಹರಿಹರ.;  ಯುವ ಪತ್ರಕರ್ತರಿಗೆ ಅಧ್ಯಯನಶೀಲತೆ ಬೇಕು, ಅಧ್ಯಯನಶೀಲತೆ ಇರುವ ಪತ್ರಕರ್ತ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡಬಲ್ಲ ಎಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹರಿಹರ ತಾಲ್ಲೂಕು ಘಟಕ ನಗರದ ಶ್ರೀಮತಿ ಗಿರಿಯಮ್ಮ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ತಾಜಾ ಸುದ್ದಿ ಪ್ರಸಾರ ಮಾಡುವ ಮುನ್ನ ಸುದ್ದಿ ನಿಜವೋ ಸುಳ್ಳೋ ಎಂದು ಖಾತರಿಪಡಿಸಿಕೊಳ್ಳಬೇಕು. ಒಂದು ಸುದ್ದಿ ಪ್ರಸಾರ ಮಾಡಿದ ನಂತರ ಸುಳ್ಳೆಂದು ಗೊತ್ತಾದರೂ ಬಂದೂಕಿನಿAದ ಹೊರಟ ಗುಂಡು ವಾಪಸ್ ಪಡೆಯಲಾಗದೆನ್ನುವಂತೆ ಅದಕ್ಕೆ ಸ್ಪಷ್ಟನೆ ನೀಡುವತ್ತಲೂ ಗಮನಹರಿಸದಿರುವುದು ಬೇಸರದ ವಿಷಯ ಎಂದರು.ಯುವ ಪತ್ರಕರ್ತರಿಗೆ ಅಧ್ಯಯನಶೀಲತೆ ಬೇಕು, ಅಧ್ಯಯನಶೀಲತೆ ಇರುವ ಪತ್ರಕರ್ತ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡಬಲ್ಲ ಎಂದ ಅವರು, ಈ ಮುಂಚೆ ಅಭಿವೃದ್ಧಿ ನಂತರ ತನಿಖಾ ರಂಗವಾಗಿದ್ದು ನಂತರ ಜಾಹಿರಾತು ಪ್ರಭಾವಿತ ಪತ್ರಿಕೋದ್ಯಮವಾಗಿ ಪರಿವರ್ತನೆಯಾಗಿದೆ ಎಂದರು.ಬಹುತೇಕ ನೈಜ ಪತ್ರಕರ್ತರು ಮನೆಗೆ ಮಾರಿ, ಊರಿಗೆ ಉಪಕಾರಿಯಾಗಿರುತ್ತಾರೆ, ಕುಟುಂಬದ ಸದಸ್ಯರ ಪೋಷಣೆ, ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಪತ್ರಕರ್ತರ ಆರೋಗ್ಯ ಹದಗೆಟ್ಟರೆ ಅಥವಾ ಮೃತಪಟ್ಟರೆ ಕುಟುಂಬದವರಿಗೆ ತೊಂದರೆಯಾಗುತ್ತದೆ ಎಂದರು.