ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪರಿಗೆ ಶಿಕ್ಷಕರ ಸಂಘ ದಿಂದ ಸನ್ಮಾನ
ಸಂಜೆವಾಣಿ ವಾರ್ತೆ
ಹರಿಹರ.2 : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಹರಿಹರ ಘಟಕದ ಪದಾಧಿಕಾರಿಗಳು ನೂತನವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆಗಮಿಸಿರುವ ಡಿ.ದುರುಗಪ್ಪರ ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ,ಪ್ರಧಾನ ಕಾರ್ಯದರ್ಶಿ ಶರಣ ಕುಮಾರ್ ಹೆಗಡೆ, ಗೌರವ ಅಧ್ಯಕ್ಷ ಗರಿಯಪ್ಪ ಹಳೆಮನೆ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕೆ.ಬಿರಪ್ಪ, ಶಿಕ್ಷಕರ ಸಂಘದ ಖಜಾಂಚಿ ವಿನೋದ, ಸಂಘಟನಾ ಕಾರ್ಯದರ್ಶಿ ಸುಮಂಗಳಮ್ಮ, ಸಹ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಚನ್ನಬಸಪ್ಪ , ಕರಬಸಪ್ಪ ಕುಪ್ಪೇ ಲೂರ್, ನಿರ್ದೇಶಕ ರುದ್ರಪ್ಪ ಮತ್ತು ಕೇಶವ, ಬಾಬು ರೆಡ್ಡಿ ಸೇರಿ ದಂತೆ ಹಲವು ಶಾಲೆಗಳ ಉಪಾಧ್ಯಾಯರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.