ಬೇಡಜಂಗಮರು ವಿಚಾರವಂತರು, ಜ್ಞಾನದಾಸೋಹಿಗಳು
ಸಂಜೆವಾಣಿ ವಾರ್ತೆ
ಚಿತ್ರದುರ್ಗ.1: ತಿರ್ಕೊಂಡ್ ಬಂದು ಕರ್ಕೊಂಡ್ ಉಣ್ಣುದೋ ಎಂಬ ಹಿರಿಯರ ಗಾದೆ ಮಾತಿನಂತೆ ಬೇಡಿಕೊಂಡು ಬಂದ ಭಿಕ್ಷೆಯನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸುವುದು ಬೇಡಜಂಗಮ ಸಮಾಜದ ಸೇವೆ ಶ್ಷಾಘನೀಯ. ಬೇಡಜಂಗಮರು ವಿಚಾರವಂತರು, ಜ್ಞಾನದಾಸೋಹಿಗಳು ಇವರ ಪ್ರೋತ್ಸಾಹದಿಂದ ಅನೇಕ ವಿದ್ಯಾರ್ಥಿಗಳು ಮಠಮಾನ್ಯಗಳ ಪ್ರಸಾದ ನಿಲಯಗಳಲ್ಲಿ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದಾರೆ ಎಂದು ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಬೇಡಜಂಗಮ ಸಮಾಜ ಸಂಸ್ಥೆ ಮತ್ತು ತಾಲ್ಲೂಕು ಬೇಡ ಜಂಗಮ ಸಮಾಜಗಳು ಚಿತ್ರದುರ್ಗ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೩-೨೪ನೇ ಸಾಲಿನ ಜಿಲ್ಲಾ ಪ್ರತಿಭಾ ಪುರಸ್ಕಾರ ಮತ್ತು ಶಿಷ್ಯ ವೇತನ ವಿತರಣಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ಪ್ರತಿಭಾ ಪುರಸ್ಕಾರ ಮಾಡುವವರೂ ಶ್ರೀಮಂತರಲ್ಲ, ತೆಗೆದುಕೊಳ್ಳುವವರೂ ಶ್ರೀಮಂತರಲ್ಲ. ಜಂಗಮತ್ವದ ಸಂಸ್ಕಾರದಿAದ ಜಂಗಮರನ್ನು ಗುರುಸ್ಥಾನದಲ್ಲಿಟ್ಟ ಕೀರ್ತಿ ಸಮಸ್ತ ಸಮುದಾಯರಿಗೆ ಸಲ್ಲುತ್ತದೆ. ಜಂಗಮರ ಸಂಸ್ಕಾರವನ್ನು ಗೌರವಿಸಿ ಪೂಜ್ಯಭಾವನೆ ಹೊಂದಬೇಕು. ಸಮಾಜದ ಋಣ ನಮ್ಮ ಮೇಲಿದೆ ಸಮಾಜದವರು ನಮ್ಮನ್ನು ಜೊತೆಮಾಡಿಕೊಂಡು ಮುಂದೆ ಸಾಗುತ್ತಾರೆ, ಗೌರವಿಸುತ್ತಾರೆ ಎಂಬ ಜಯದೇವ ಜಗದ್ಗುರುಗಳ ವಾಣಿಯಂತೆ ಸರ್ವರಿಗೂ ಸಮಪಾಲು ಸಮಬಾಳು ಎಂಬAತೆ ಒಟ್ಟಾಗಿ ಕಾಯಕವ ಮಾಡಿ ನೆಮ್ಮದಿಯಿಂದ ಆರೋಗ್ಯವಂತರಾಗಿ ಬಾಳಬೇಕು ಎಂದರು.