ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨ : ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ದಿನೇಶ್ ಕೆ. ಶೆಟ್ಟಿಯವರು ಅಧಿಕಾರ ವಹಿಸಿಕೊಂಡ ಸವಿನೆನಪಿಗಾಗಿ ಕೆ.ಟಿ.ಜೆ. ನಗರದ ೨ನೇ ಮೇನ್, ೯ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್‌ಬುಕ್‌ಗಳನ್ನು ವಿತರಿಸುವ ಮೂಲಕ ಹಾಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ದಿನೇಶ್ ಕೆ. ಶೆಟ್ಟಿಯವರು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಕನ್ನಡ ಭಾಷೆಯಲ್ಲಿಯೇ ಐ.ಎ.ಎಸ್. ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಕೆ. ಶಿವರಾಂ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಉನ್ನತ ಸ್ಥಾನಕ್ಕೇರುವುದು ಕಷ್ಟವಲ್ಲ ಎಂದು ತೋರಿಸಿಕೊಟ್ಟರು ಎಂದು ಹೇಳಿದರು.ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಸಮವಸ್ತç, ಪಠ್ಯಪುಸ್ತಕಗಳು ವಿತರಿಸಿ ಮಧ್ಯಾಹ್ನ ಬಿಸಿಯೂಟವನ್ನು ನೀಡಲಾಗುತ್ತಿದ್ದು, ಗುಣಮಟ್ಟದ ಶಿಕ್ಷಣವು ಸಹ ನೀಡಲಾಗುತ್ತಿದೆ. ನೀವು ಸಹ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.  ಈ ಸಂದರ್ಭದಲ್ಲಿ ಕೆ.ಟಿ.ಜೆ. ನಗರ ನಾಗರೀಕ ಹಿತರಕ್ಷಣಾ ಸಮಿತಿಯ ಕೇರಂ ಗಣೇಶ್, ಡಿ.ಎನ್. ಜಗದೀಶ್, ನಾಗೇಂದ್ರ ಬಂಡೀಕರ್, ವಕೀಲರಾದ ದುರ್ಗೇಶ್, ಆದಾಪುರ ನಾಗರಾಜ್, ಗೋಣೆಪ್ಪ, ಮಾನು ಬಶೀರ್, ಎಸ್., ಶ್ರೀನಿವಾಸ್ ಕಲ್ಪತರು, ಕೆ.ಎಸ್. ವಿಜಯಕುಮಾರ್, ಸೋಮ್ಸ್, ಸುನೀಲ್ (ಗುಂಡ), ಮೈಲಾರಪ್ಪ, ಅಕ್ಬರ್ ಬಾಷಾ, ಫಯಾಜ್ ಅಹಮ್ಮದ್, ನಾಗರಾಜ್, ದುರುಗಪ್ಪ, ಮತ್ತು ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.