ವಾಲ್ಮೀಕಿ ಗುರುಪೀಠದಲ್ಲಿ ಉಚಿತ ನೋಟ್ ಬುಕ್, ಪೆನ್ನು ವಿತರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨; ಹುಲ್ಮನಿ ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹುಲ್ಮನಿ ಗಣೇಶ್ ಗೆಳೆಯರ ಬಳಗದ ವತಿಯಿಂದ ಹರಿಹರದ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿರುವ ಶ್ರೀಮಠ ಗುರುಕುಲದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೂ ಉಚಿತ ನೋಟ್ಬುಕ್ ಮತ್ತು ಪೆನ್ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಹುಲ್ಮನಿ ಗಣೇಶ್ ಗೆಳೆಯರ ಬಳಗದ ಪಿ.ಬಿ. ಅಂಜುಕುಮಾರ್, ಸುನಿಲ್ ಕುಮಾರ್ ಜಿ.ಪಿ.. ವಿನಯ್ ಕುಮಾರ್ ಕೆ.ಕೆ., ಅಮಿತ್ ಜಿ.ಪಿ, ಮಹಾಲಿಂಗರಾಜು ಕೆ.. ಚೇತನ್ ಕುಮಾರ್ ಬಿ, ಗುರುರಾಜ್ ಎನ್.. ಅಣ್ಣಪ್ಪ ಜಿ., ಸಂತೋಷ್ ಎಸ್., ಬಸವರಾಜ್ ಎಂ.. ಉಮೇಶ್, ಮಂಜು ಎನ್, ಬೀರೇಶ್ ಹಾಗೂ ಗುರುಕುಲದ ಶಿಕ್ಷಕ ವೃಂದದವರಾದ ಮುಖ್ಯೋಪಾಧ್ಯಾಯರಾದ ಹೆಚ್.ಎಂ.ಸಿದ್ದೇಶ್, ಶಿಕ್ಷಕರುಗಳಾದ ಆರಾಧ್ಯ, ಗಿರೀಶ್, ಸಂಜೀವ್, ಗಗನ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.