ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ ರಮೇಶ ಎ. ಗುತ್ತೇದಾರ: ಎಸ್.ಟಿ.ಬಿರಾದರ
ಕಲಬುರಗಿ,ಆ.1-ಜೇವರ್ಗಿ ನಗರದ ಉತ್ತಮ ಶಾಲೆಗಳು ಎಂದು ಗುರುತಿಸಲ್ಪಡುವ ಶಾಲೆಗಳಲ್ಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಮರೇಶ್ವರ ಶಾಲೆಗಳಿಂದ ಪಟ್ಟಣದ ಕನ್ಯಾ ಪ್ರೌಢಶಾಲೆಗೆ ಹೆಚ್ಚಿನ ಮಕ್ಕಳು ಪ್ರವೇಶ ಪಡೆಯುತ್ತಿದ್ದಾರೆ ಎಂದು ಜೇವರ್ಗಿ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಟಿ.ಬಿರಾದರ ಹೇಳಿದರು.
ಪಟ್ಟಣದ ವಿದ್ಯಾನಗರ ಬಡಾವಣೆಯ ವಿಶ್ವಗುರು ವಿಶ್ವರಾಧ್ಯ ದೇವಸ್ಥಾನದ ಆವರಣದಲ್ಲಿ ಶ್ರೀಹರಿ ಅನುದಾನಿತ ಹಿರಿಯ ಶಾಲೆಯ ಶಿಕ್ಷಕ ರಮೇಶ ಎ ಗುತ್ತೇದಾರ ಅವರು ವಯೋನಿವೃತ್ತಿ ಹೊಂದಿದ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಮೇಶ ಎ.ಗುತ್ತೇದಾರ ಅವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ ಎಂದು ಶ್ಲಾಘಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಜೇವರ್ಗಿ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮರೆಪ್ಪ ಮೂಲಿಮನಿ, ಜೇವರ್ಗಿ ತಾಲ್ಲೂಕ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ದ್ಯಾಮಗೊಂಡ ಮತನಾಡಿ, ರಮೇಶ ಗುತ್ತೇದಾರ ಅವರು ಉತ್ತಮವಾಗಿ ಸೇವೆ ಸಲ್ಲಿಸುವುದರ ಮೂಲಕ ಮಕ್ಕಳ ಪ್ರೀತಿ, ವಿಶ್ವಾಸಗಳಿಸಿದ್ದಾರೆ. ಶ್ರೀಹರಿ ಅನುದಾನಿತ ಶಾಲೆಯನ್ನು ಒಂದು ಉತ್ತಮ ಶಾಲೆಯನ್ನಾಗಿಸುವಲ್ಲಿ ಅವರು ಪ್ರಮುಖಪಾತ್ರ ವಹಿಸಿದ್ದಾರೆ ಎಂದು ಶ್ಲಾಘನೆ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ ಎ ಗುತ್ತೇದಾರ ಅವರು, ಭಾವುಕರಾಗಿ ಕಣ್ಣಂಚಿನಲ್ಲಿ ನೀರು ತಂದು ಮುದ್ದು ಮಕ್ಕಳ ತಮ್ಮ ಸಂಬAಧ ಇಂದು ಕಳಚಿ ಹೊಗುವುದು ಕಂಡು ನನಗೆ ನೋವು ಆಗಿದೆ ಎಲ ್ಲಐಶ್ವರ್ಯ, ಸಂಪತ್ತಿಗಿAತಲೂ ಮಕ್ಕಳ ಪ್ರೀತಿ, ವಾತ್ಸಲ್ಯ ಅಮೂಲ್ಯವಾದದ್ದು ಎಂದರು.
ಸಮಾರAಭದಲ್ಲಿ ಗುಡೂರ ಗ್ರಾಮ ಪಂಚಾಯತ ಅಧ್ಯಕ್ಷ ದೇವಿಂದ್ರ.ಆರ್ ಗುತ್ತೇದಾರ, ಶಿಕ್ಷಕರಾದ ಕಾಸಯ್ಯಗುತ್ತೇದಾರ ,ಜೇವರ್ಗಿ ಪಟ್ಟಣ ಪಂಚಾಯತ ಸದಸ್ಯ ಗುರುಶಾಂತಯ್ಯ ಹಿರೇಮಠ, ಅನುದಾನಿತ ಶಾಲೆಯನೌಕರರ ಸಂಘದ ಅಧ್ಯಕ್ಷ ವೀರಯ್ಯ ಶಾಸ್ತ್ರೀ, ಕಾರ್ಯದರ್ಶಿ ಸಾಹೇಬಗೌಡ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ ಸಿದ್ದಲಿಂಗ ಮಾವೂರ ಕಾರ್ಯಕ್ರಮ ನಿರೂಪಿಸಿದರು.