ವಿಶ್ವ ಸ್ತನ್ಯಪಾನ ದಿನ ಜಾಥಾಕ್ಕೆ ಚಾಲನೆ
ಕಲಬುರಗಿ,ಆ.1-ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ವಿಶ್ವ ಸ್ತನ್ಯಪಾನ ದಿನ ( ಸಪ್ತಾಹ ) ಕಾರ್ಯಕ್ರಮದ ಜಾಥಾಕ್ಕೆ ಡಿಹೆಚ್‌ಒ ಡಾ.ರತಿಕಾಂತ ಸ್ವಾಮಿ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಚಾಲನೆ ನೀಡಿದರು.
ಜಿಲ್ಲಾ ಅರ್‌ಸಿಹೆಚ್ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಶಸ್ತ್ರಜ್ಞರು ಮತ್ತು ಅಧಿಕ್ಷಕರಾದ ಡಾ.ಓಂಪ್ರಕಾಶ್ ಅಂಬೂರೆ, ಡಿಎಲ್‌ಓ ಡಾ.ರಾಜಕುಮಾರ ಕುಲ್ಕರ್ಣಿ. ಡಿಎಸ್‌ಓ ಡಿಪಿಎಂ ವೀರೇಶ ಜವಳಗೇರಿ, ಡಿಪಿಸಿ ರವೀಂದ್ರನಾಥ ಠಾಕೂರ್, ಶ್ರೀಕಾಂತ್ ಸ್ವಾಮಿ, ಮಂಜುನಾಥ ಕಂಬಾಳಿಮಠ, ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿಗಳು, ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ವಿದ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.