ಗುರುಮಠಕಲ್‌ದಿಂದ ರಾಯಚೂರಿಗೆ ಹೊಸ ಬಸ್
ಗುರುಮಠಕಲ್,ಆ.1-ಗುರುಮಠಕಲ್‌ನಿಂದ ರಾಯಚೂರಿಗೆ ಹೊಸದಾಗಿ ಬಸ್ ಸಂಚಾರ ಆರಂಭಿಸಲಾಗಿದೆ. ಇದರಿಂದ ಗುರುಮಠಕಲ್‌ದಿಂದ ರಾಯಚೂರಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಿದೆ.
ಎಲ್ಹೇರಿ, ಕಳಬೇಳಗುಂದಿ, ಮಾಧ್ವರ್, ಸೈದಪೂರ ಮಾರ್ಗವಾಗಿ ರಾಯಚೂರಿಗೆ ಸಂಚರಿಸಲಿದೆ.
ಗುರುಮಠಕಲ್ ಬಸ್ ನಿಲ್ದಾಣದಿಂದ ಬೆಳಗ್ಗೆ 7-45 ಗಂಟೆಗೆ ಹೊರಡುವ ಈ ಬಸ್ಸು ರಾಯಾಚೂರುಗೆ 10-30 ಗಂಟೆಗೆ ತಲುಪಲಿದೆ. ಮತ್ತೆ ಗುರುಮಠಕಲ್‌ನಿಂದ ಮಧ್ಯಾನ 1-45 ಬಿಡಲಿದೆ. ರಾಯಾಚೂರಿನಲ್ಲಿ 4- 15 ನಿಮಿಷಕ್ಕೆ ಬಿಟ್ಟ ಈ ಬಸ್ಸು 7-15 ನೀಮಿಷಕ್ಕೆ ಗುರುಮಠಕಲ್‌ಗೆ ಬಂದು ತಲುಪುತ್ತದೆ ಎಂದು ಘಟಕದ ವ್ಯವಸ್ಥಾಪಕರು ಮತ್ತು ಸಹಾಯಕ ಸಂಚಾರ ನೀರಿಕ್ಷಕರಾದ ಶರಣಪ್ಪ ಹೂಗಾರ್ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.