4 ರಂದು ಶಿವಾನುಭವ ಚಿಂತನಾ ಗೋಷ್ಠಿ
ಕಲಬುರಗಿ,ಆ.1-ನಾಗರ ಅಮವಾಸ್ಯೆ ನಿಮಿತ್ತ ಜು.4 ರಂದು ಜಿಲ್ಲೆಯ ವಿವಿಧ ಮಠಗಳಲ್ಲಿ ಶಿವಾನುಭವ ಚಿಂತನಾ ಗೋಷ್ಠಿ ಜರುಗಲಿದೆ.
ಅಂದು ಅಬ್ಬೇತುಮಕೂರಿನ ವಿಶ್ವರಾಧ್ಯ ಮಠದಲ್ಲಿ ರಾತ್ರಿ 8.30ಕ್ಕೆ 471ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಡಾ.ಗಂಗಾಧರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಧಾರ್ಮಿಕ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಜೇವರ್ಗಿ ತಾಲ್ಲೂಕಿನ ಶಾಖಾಪೂರ ವಿಶ್ವರಾಧ್ಯ ತಪೋವನ ಮಠದಲ್ಲಿ ರಾತ್ರಿ 8ಕ್ಕೆ 361ನೇ ಗೋಷ್ಠಿ ನಡೆಯಲಿದೆ. ಡಾ.ಸಿದ್ದರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಪ್ರವಚನ ನೀಡಲಿದ್ದಾರೆ. ಕಲಬುರಗಿ ತಾಲ್ಲೂಕಿನ ಶ್ರೀನಿವಾಸ ಸರಡಗಿ ಚಿಕ್ಕವಿರೇಶ್ವರ ಹಿರೇಮಠ ಸಂಸ್ಥಾನದಲ್ಲಿ ರಾತ್ರಿ 8ಕ್ಕೆ 306ನೇ ಗೋಷ್ಠಿ ನಡೆಯಲಿದೆ. ಡಾ.ರೇವಣಸಿದ್ದ ಶಿವಾಚಾರ್ಯರು ನೇತೃತ್ವವಹಿಸಲಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನ ಅಪ್ಪನ ಶಾಖಾ ಮಠದಲ್ಲಿ ಆಗಸ್ಟ್ 9 ರಂದು ರಾತ್ರಿ 8.50ಕ್ಕೆ 288ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಅಬ್ಬೇತುಮಕೂರ ಮಠದ ಡಾ.ಗಂಗಾಧರ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ವಿಶ್ವರಾಧ್ಯ ಸೇವಾ ಸಮಿತಿ ನಗರ ಘಟಕದ ವಕ್ತಾರರಾದ ಬಸವರಾಜ ಶೀಲವಂತ ತಿಳಿಸಿದ್ದಾರೆ.