ಆರು ತೊಲಿ ಚಿನ್ನಕ್ಕಾಗಿ ಪತಿಯಿಂದ ಪತ್ನಿ ಹತ್ಯೆ
ವಿಜಯಪುರ, ಆ.1: ಆರು ತೊಲಿ ಚಿನ್ನಕ್ಕಾಗಿ ಪತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಆಳೂರ ತಾಂಡಾ ಎಲ್‌ಟಿ 2ರಲ್ಲಿ ನಡೆದಿದೆ.
ರೇಷ್ಮಾ ವಿಕ್ರಮ ಚವ್ಹಾಣ ಹತ್ಯೆಯಾಗಿರುವ ಮಹಿಳೆ.
ಪತಿ ವಿಕ್ರಮ ಚವ್ಹಾಣ, ಮಾವ ಪ್ರಕಾಶ ಚವ್ಹಾಣ, ಅತ್ತೆ ಮೀನಾಕ್ಷಿ ಚವ್ಹಾಣನಿಂದ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮನೆಯಲ್ಲಿದ್ದ ಆರು ತೊಲಿ ಚಿನ್ನ ಹಾಗೂ ಐದು ಲಕ್ಷ ವರದಕ್ಷಿಣೆ ತರುವಂತೆ ಪತಿ ಕುಟುಂಬಸ್ಥರಿAದ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದು, ರೇಷ್ಮಾಳ ಕುತ್ತಿಗೆ ಭಾಗದಲ್ಲಿ ಹತ್ಯೆಯ ಚಿಹ್ನೆಗಳು ಪತ್ತೆಯಾಗಿವೆ ಎಂದು ರೇಷ್ಮಾ ಕುಟುಂಬಸ್ಥರು ದೂರಿದ್ದಾರೆ.
ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.