ಶಾಸಕರಿಂದ ಅಧಿಕಾರ ದುರುಪಯೋಗ ಆರೋಪ
ಹುಮನಾಬಾದ್ :ಆ.1:ಮತಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ್ ಅವರು ತಮ್ಮ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಂಗಮೇಶ ಚಿದ್ರಿ ಆರೋಪಿಸಿದರು.
ಪಟ್ಟಣದ ಖಾಸಗಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಧಮ್ಮನಸೂರ ವ್ಯಾಪ್ತಿಯ ರಕ್ಷಿತ ಅರಣ್ಯದ ಜಮೀನು ಒತ್ತುವರಿಗೆ ಸಂಬAಧಿಸಿದAತೆ ಅಧಿಕಾರಿಗಳು ಜಂಟಿ ಸರ್ವೆ ಮಾಡಿಸದೇ ಶಾಸಕ ಡಾ. ಸಿದ್ದು ಪಾಟೀಲ್ ಅವರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಶಡ್ ಗಳನ್ನು ನೆಲಸಮ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಅನೇಕ ವರ್ಷಗಳಿಂದ ಈ ಅರಣ್ಯ ಪ್ರದೇಶದ ಸ್ಥಳದಲ್ಲಿ ಶಡ್ ಗಳನ್ನು ನಿರ್ಮಾಣ ಮಾಡಿರುವ ಸಂಪೂರ್ಣ ಮಾಹಿತಿ ಸ್ವತಃ ಶಾಸಕರಿಗೂ ಗೊತ್ತಿತ್ತು. ಆದರೆ ಇಲ್ಲಿವರೆಗೆ ಯಾವ ಕಾರಣಕ್ಕಾಗಿ ಮೌನ ವಹಿಸಿದ್ದರು ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಚಿದ್ರಿ, ಹರವಿಂದರ ಸಿಂಗ್ ಸೇರಿ ಅನೇಕರಿದ್ದರು.