ವಿದ್ಯಾರ್ಥಿಯ ಬಾಳಿನ ಭವಿಷ್ಯಕ್ಕೆ ಶಿಕ್ಷಣವೇ ದಾರಿದೀಪ:ಹರೀಶ
ತಾಳಿಕೋಟೆ:ಆ.1: ಭಾರತ ದೇಶವು ಆರ್ಥಿಕವಾಗಿ ಸದೃಢವಾಗಬೇಕಾದರೆ ದೇಶದ ಜನರಿಗೆ ಉತ್ತಮವಾದ ಶಿಕ್ಷಣ ದೊರತಾಗ ಸಂವಿಧಾನದ ಆಸೆಯಂತೆ ಜೀವನ ಮತ್ತು ಬದುಕು ರೂಪಿಸಬಹುದು ಎಂದು ಅಜೀಮ್ ಪ್ರೇಮಜಿ ಫೌಂಡೇಶನ ಜಿಲ್ಲಾ ಸಂಯೋಜಕರಾದ ಹರೀಶ ಅವರು ಹೇಳಿದರು
ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರರಂದು ಅಜೀಮ್ ಪ್ರೇಮಜಿ ಫೌಂಡೇಶನ ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದ ಅವರು ಶಿಕ್ಷಣವೆಂಬುದು ವಿಧ್ಯಾರ್ಥಿಗಳ ಬಾಳಿಗೆ ಭವಿಷ್ಯಕ್ಕೆ ದಾರಿದೀಪವಾಗಿದೆ ಎಲ್ಲರು ಉತ್ತಮ ಶಿಕ್ಷಣದತ್ತ ಹೆಜ್ಜೆ ಹಾಕುವದರೊಂದಿಗೆ ಉತ್ತಮವಾದ ಬಧುಕನ್ನು ಕಟ್ಟಿಕೊಳ್ಳಬೇಕೆಂದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಅಜೀಮ್ ಪ್ರೇಮಜಿ ಪೌಂಡೇಶನ್‌ದ ಸಂಪನ್ಮೂಲ ವ್ಯಕ್ತೊಗಳಾದ ಎಂ.ಎಸ್ ಹಾದಿಮನಿ ಅವರು ಮಾತನಾಡಿ ಶಸಕ್ತ ದೇಶ ಸದೃಢ ಸಮಾಜ ನಿರ್ಮಾಣಕ್ಕಾಗಿ ಹಾಗೂ ಆರ್ಥಿಕ ದುರ್ಬಲ ವರ್ಗಗಳ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕಾಗಿ ಅಜೀಂ ಪ್ರೇಮಜೀ ಫೌಂಡೇಶನ ವತಿಯಿಂದ ಸಹಾಯಧನ ನೀಡುವುದರ ಜೊತೆಗೆ ಈ ಸಂಸ್ಥೆ ಇಂದು ದುರ್ಬಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಯೋಗ್ಯ ತರಬೇತಿಗೊಳಿಸುತ್ತಿದೆ ಒಳ್ಳೆಯ ಪ್ರಜೆಯನ್ನು ನಿರ್ಮಾಣ ಮಾಡುವ ದಿಶೆಯಲ್ಲಿ ದಾಪುಗಾಲು ಇಟ್ಟು ಇಂದು ಮುನ್ನಡೆಯುತ್ತಿದೆ ಎಂದು ಹೇಳಿದ ಅವರು ಮಗುವಿನಲ್ಲಿ ಮಾನವೀಯ ಮೌಲ್ಯ ನೈತಿಕ ಗುಣ ಬೆಳೆಸಿದಾಗ ಸಾಮರಸ್ಯದ ಬದುಕು ಸುಂದರಗೊಳತ್ತದೆ ಮತ್ತು ನಾವೇಲ್ಲರೂ ಒಂದೇ ಎನ್ನುವ ಮನೋಭಾವನೆ ಮೂಡುತ್ತದೆ ಆ ದಿಶೆಯಲ್ಲಿ ನಿಮ್ಮ ಚಿಂತನೆಗಳು ಇರಲಿ ಸ್ವ ಉದ್ಯೋಗ ಭಾರತೀಯ ಸಾಹಿತ್ಯ ಆರೋಗ್ಯ ಸೇವಾ ಮನೋಭಾವ ಮೂಡಿಸುವ ಹೆಗ್ಗುರುತು ಈ ಸಂಸ್ಥೆಗೆ ಗುರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಮೇಶ ಭಂಟನೂರ ಅವರು ಮಾತನಾಡಿ ಪ್ರಶಿಕ್ಷಣಾರ್ಥಿಗಳ ಏಳಿಗೆಗೆ ಇಂತಹ ಕಾರ್ಯಾಗಾರಗಳು ಅವಶ್ಯವಿದೆ ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸುವ ಹೊಸ ಆಲೋಚನೆಗಳು ಅಜೀಮ್ ಪ್ರೇಮಜಿ ಪೌಂಡೇಶನ್ ಹೊಂದಿದ್ದು ಇಂದಿನ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ಮೂಡಿಸಿದೆ ಎಂದರು.
ಅಜೀಮ್ ಪ್ರೇಮಜಿ ಫೌಂಡೇಶನ ಸಂಪನ್ಮೂಲ ವ್ಯಕ್ತಿಗಳಾದ ಚೇತನ, ಉಪನ್ಯಾಸಕರಾದ ವಾಯ್.ಎಚ್ ಅಂಗಡಗೇರಿ, ಎ.ಎ. ಗಂಗನಗೌಡ, ಸುರೇಶ ಬಡಿಗೇರ, ವಿಜಯಲಕ್ಷಿ÷್ಮ ಮಠಪತಿ, ಮೌನೇಶ ಕೆಲ್ಲೂರು, ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ. ಕು.ಐಶ್ವರ್ಯ ಚವ್ಹಾಣ ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ಶ್ರೀಮತಿ ನೀಲಮ್ಮ ಮಂಗ್ಯಾಳ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಅಮೀರಬಿ ಜಾಮದಾರ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಸಂಗೀತಾ ಯರಗಲ್ ವಂದಿಸಿದರು.