ಶಿಕ್ಷಕ ದೇವರ ಪ್ರತಿರೂಪ : ಸಿ.ಎಂ ಬಂಡಗಾರ
ಇಂಡಿ:ಆ.1: ಸಮಾಜದಲ್ಲಿ ಶಿಕ್ಷಕರಿಗೆ ಸಾಕಷ್ಟು ಅಭಿಮಾನದಿಂದ ಕಾಣುತ್ತಾರೆ , ಶಿಕ್ಷಕ ದೇವರ ಪ್ರತಿರೂಪ ಎಂದು ಗೌರವಿಸುತ್ತಾರೆ ,ಇಂದಿನ ದಿನಮಾನಗಳಲ್ಲಿ ನೌಕರಿ ಸಿಗುವುದು ಸುಲಭದ ಮಾತಲ್ಲ ಅದರಲ್ಲಿ ಶಿಕ್ಷಕ ಸ್ಥಾನ ಅತ್ಯೆಂತ ಪವಿತ್ರವಾಗಿದ್ದು ಒಳ್ಳೇಯ ಶಿಸ್ತು, ಬದ್ದತೆಯಿಂದ ಕಾಯಕದಲ್ಲಿ ತೊಡಗಬೇಕು ಎಂದು ನಾದ ಗ್ರಾಮದ ಸರಕಾರಿ ಪ್ರೌಢ ಶಾಲೆಮುಖ್ಯೋಪಾಧ್ಯಾಯ ಹಾಗೂ ಯುವಸಾಹಿತಿಸಿ.ಎಂ ಬಂಡಗಾರ ಹೇಳಿದರು.
ಶ್ರೀಬಸವೇಶ್ವರ ಪ್ರೌಢ ಶಾಲೆಯಲ್ಲಿ ನಿವೃತ್ತ ಮುಖ್ಯೊಪಾಧ್ಯಾಯರು ಹಾಗೂ ಶಿಕ್ಷಕರ ಶುಭ ಹಾರೈಕೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಶಿಕ್ಷಕ, ವಿಧ್ಯಾರ್ಥಿ
,ಬೋದನೆ ಶಿಕ್ಷಣದಲ್ಲಿ ಬಹಳ ಪ್ರಮುಖವಾಗಿದೆ. ಪ್ರಾಚೀನ ಕಾಲದಿಂದ ಹಿಡಿದು ಇಂದಿನವರೆಗೂ ಶಿಕ್ಷಕರಿಗೆ ದೇವರ ಸ್ಥಾನದಲ್ಲಿಟ್ಟು ಗೌರವಿಸುವ ಸಂಸ್ಕೃತಿ ಭಾರತೀಯರದಾಗಿದೆ. ಶಿಕ್ಷಕ ಮಕ್ಕಳ ನಡುವೆ ಒಳ್ಳೇಯ ಬಾಂಧವ್ಯ ಇರಬೇಕು. ಶಿಕ್ಷಕರಾದವರು ಸದಾ ಕಲಿಕೆಯಲ್ಲಿದ್ದು ವಿಧ್ಯಾರ್ಥಿಗಳಿಗೆ ಹೊಸತನ್ನು ತಿಳಿಸಬೇಕು. ಶಿಕ್ಷಣ ನಿಂತ ನೀರಲ್ಲ ಸದಾ ಹರಿಯುವ ಪ್ರವಾಹವಿದ್ದಂತೆ ಶಿಕ್ಷಕರು ನಾವನಾವೀನ್ಯತೆ ಕಡೆ ಸಾಗಬೇಕು. ಬಸವೇಶ್ವರ ಪ್ರೌಢ ಶಾಲೆಯ ಮುಖ್ಯ ಗುರುಗಳು ಜೆ.ಟಿ ಕೊಟಗೊಂಡ ಹಾಗೂ ಶಿಕ್ಷಕರಾದಿಯಾಗಿ ಈ ಸಂಸ್ಥೆಯ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದೀರಿ ಅನುಧಾನಕ್ಕಿಂತ ಪೂರ್ವ ನಿಮ್ಮ ಸೇವೆ ಸಾಕಷ್ಟು ಮಾಡಿ ಇದಕ್ಕೊಂದು ಹೊಸಸ್ಪರ್ಷ ನೀಡಿ ಈ ಸಂಸ್ಥೆಯಲ್ಲಿ ಸುಧೀರ್ಘ ದುಡಿದು ಇಂದು ನಿವೃತ್ತಿಯಾಗುತ್ತಿರುವುದು ಅತೀವ ದುಖದ ಸಂಗತಿ ಆದರೆ ಸರಕಾರ ವ್ಯವಸ್ಥೆಯಲ್ಲಿ 60 ವರ್ಷದ ನಂತರ ನಿವೃತ್ತಿ ಸಹಜ ನಿಮ್ಮ ಅವಧಿಯಲ್ಲಿ ಮಾಡಿದ ಕೆಲಸಗಳು ಜಿವಂತ ಇರುತ್ತವೆ. ಮುಂಬರುವ ದಿನಗಳಲ್ಲಿ ನಿವೃತ್ತಿಯ ನಂತರ ಸಮಾಜಿಕ ,ಅಧ್ಯಾತ್ಮಿಕ ,ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿ ಒಳ್ಳೇಯ ಕೆಲಸ ಮಾಡಿ ಎಂದರು.
ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಅಭಿನವ ಪುಂಡಲಿAಗ ,ಮಹಾಶಿವಯೋಗಿಗಳು, ರಾಚೋಟೇಶ್ವರ ಶಿವಾಚಾರ್ಯರು ದಿವ್ಯಸಾನಿಧ್ಯವಹಿಸಿ ಆರ್ಶೀಚನ ನೀಡಿದರು.
ಶ್ರೀಬಸವೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಎಸ್.ಆರ್ ವಿಭೂತಿ ಅಧಕ್ಷೀಯ ಮಾತಗಳಾಡಿದರು.
ಬಾಕ್ಸ ಮಕ್ಕಳ ಸೇವೆ ದೇವರ ಸೇವೆ ಕಾಣಬೇಕು ಸಾರ್ವಜನಿಕ ಬದುಕಿನಲ್ಲಿ ಒಳ್ಳೇಯ ನಡೆ ನುಡಿ ಸೇವಾ ಮಣೋಭಾವನೆ ಸಮಯ ಪ್ರಜ್ಞೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯ ಎಂಬ ಸಂಪತ್ತು ಪ್ರಳಯಕಾಲದಲ್ಲಿ ನಶೀಸುವುದಿಲ್ಲ ಇಂತಹ ಅಮೋಘ ಅನರ್ಘ್ಯ ರತ್ನ ಶಿಕ್ಷಣ ಇದನ್ನು ವಿಧ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ನಿವೃತ್ತಿ ಅನಿವಾರ್ಯ ಬದುಕು ಪೂರ್ತಿಯಾಗಿರುತ್ತದೆ ಇರುವ ದಿನಗಳಲ್ಲಿ ಸಮಾಜದಲ್ಲಿ ಒಳ್ಳೇಯ ಕೆಲಸ ಮಾಡಿ .ಸಮಾಜ ನಮ್ಮನ್ನು ಗುರುತಿಸುತ್ತದೆ ಉಸಿರು ಹೋದರೂ ಹೆಸರು ಉಳಿಯುವಂತಾಗಬೇಕು ,ಶಿಕ್ಷಕನಿಗೆ ಶಾಲೆಯಲ್ಲಿ ಮಾತ್ರ ಮೌಲ್ಯಯುತ ಗುಣಗಳಿದ್ದರೆ ಸಾಲದು ಸಮಾಜದ ಹೋರಗೂ ಇರಬೇಕು ವಿಧ್ಯಾರ್ಥಿಗಳಿಗೆ ಶಿಕ್ಷಕರೇ ಮಾಡಲ್ ಎಂದು ಉಪನ್ಯಾಸ ನೀಡಿದರು.
ಸಿ.ಎಂ.ಬAಡಗಾರ ಯುವ ಸಾಹಿತಿಗಳು ಹಾಗೂ ಮುಖ್ಯಗುರುಗಳು ಸರಕಾರಿ ಪ್ರೌಢ ಶಾಲೆ ನಾದ
ಜೆಟಿ ಕೊಟಗೊಂಡ, ಶಿಕ್ಷಕ ಆರ್.ಎನ್ ರಾಠೋಡ,ಚಿತ್ರಕಲಾ ಶಿಕ್ಷಕ ಎಂ.ಬಿ ವಾರದ, ನೂತನ ಮುಖ್ಯೋಪಾಧ್ಯಾಯ ಎಸ್.ಎಂ ಖಾಜಿ, ಶಿಕ್ಷಕರಾದ ಎಸ್.ಎ ಮೇತ್ರಿ, ಕೆ.ಎಸ್ ಸನತ್, ಎಸ್.ಟಿ ಜೇವೂರ, ಮುಖ್ಯಗುರು ನಿಜಣ್ಣಾ ಕಾಳೆ, ಪ್ರಾಚಾರ್ಯ ಚಂದ್ರಶೇಖರ ದಶವಂತ
ಡಿ.ಎಸ್ ಹಿರೇಕುರಬರ ಹಾಗೂ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.