ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಶಿಬಿರದ ಸಮಾರೋಪ
ಬೀದರ :ಆ.1: ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದ ವತಿಯಿಂದ ನಗರದ ಪ್ರತಿಷ್ಠಿತ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಎನ್.ಎಸ್.ಎಸ್. ಶಿಬಿರದ ಸಮಾರೋಪÀ ಸಮಾರಂಭದ ಅಂಗವಾಗಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ಆವರಣದ ಶಾಲಾ ಕಾಲೇಜುಗಳ ಸಂಚಾಲಕರಾದ ಡಾ. ರಜನೀಶ ಎಸ್. ವಾಲಿಯವರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಇಂದಿನ ಶಿಬಿರಾರ್ಥಿಗಳು ವೈಜ್ಞಾನಿಕ ದೃಷ್ಠಿಕೋನದಿಂದ ವಿಚಾರ ಮಾಡಿದಾಗ ತಾವು ಕಲಿತ ಶಿಕ್ಷಣವು ಮುಂದಿನ ದಿನಗಳಲ್ಲಿ ಯಶಸ್ವಿಯಾಗಲು ಏಕಾಗ್ರತೆಯಿಂದ ಅಧ್ಯಯನ ಮಾಡಿ ಉನ್ನತ ಹುದ್ದೆ ಪಡೆಯಲು ಸಹಾಯವಾಗುತ್ತದೆ. ತಾವು ಪಡೆದ ಹುದ್ದೆಯಿಂದ ಗುರು ಹಿರಿಯರನ್ನು ಗೌರವಿಸಿ, ತಂದೆ, ತಾಯಿಗಳನ್ನು ದೇವರೆಂದು ಪೂಜಿಸಿ ಅಹಂಕಾರ ಗರ್ವವನ್ನು ತ್ಯಜಿಸಿ ಸಮಾಜದಲ್ಲಿ ಸಹನೆ ತಾಳ್ಮೆಯಿಂದ ಬದುಕನ್ನು ಸಾಗಿಸಬೇಕೆಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಬೀದರ ವಿಶ್ವವಿದ್ಯಾಲಯ ಬೀದರನ ಸಿಂಡಿಕೇಟ ಸದಸ್ಯರಾದ ಶ್ರೀ ನಾಗಭೂಷಣ ಅವರು ಮಾತನಾಡುತ್ತಾ ಈ ಮಹಾವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳು ಅತ್ಯಂತ ಪುಣ್ಯವಂತರು ಹಾಗೂ ಇಲ್ಲಿ ಅಭ್ಯಾಸಿಸಿದ ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆದು ಸಮಾಜದಲ್ಲಿ ಗೌರವದ ಸ್ಥಾನ ಪಡೆದಿರುತ್ತಾರೆ. ಶಿಬಿರಾರ್ಥಿಗಳಾದ ತಾವು ಇಲ್ಲಿ ಕಲಿತ ಸ್ವಚ್ಛತೆ ಕಾರ್ಯ ತಮ್ಮ ತಮ್ಮ ಗ್ರಾಮಗಳಲ್ಲಿ ಸಂಘ ಕಟ್ಟಿಕೊಂಡು ಗ್ರಾಮದ ನೈರ್ಮಲ್ಯ ಕಾಪಾಡಲು ಮುಂದಾಗಬೇಕೆAದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಇನ್ನೋರ್ವ ಬೀದರ ವಿಶ್ವವಿದ್ಯಾಲಯ ಬೀದರನ ಸಿಂಡಿಕೇಟ ಸದಸ್ಯರಾದ ಶ್ರೀ ಶಾಂತಲಿAಗ ಸಾವಳಗಿಯವರು ಮಾತನಾಡುತ್ತಾ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಈ ಜೀವನವನ್ನು ತಾವು ದುಶ್ಚಟಕ್ಕೆ ಬಲಿಯಾಗದೆ ಒಳ್ಳೆಯ ಹವ್ಯಾಸಗಳು ಮೈಗೂಡಿಸಿಕೊಂಡು ಅಂದರೆ, ಗ್ರಂಥಗಳು ಓದುವುದು, ಕವನಗಳು, ಹಾಸ್ಯ ಲೇಖನಗಳು ಬರೆದು ಪತ್ರಿಕೆಗಳಿಗೆ ಕೊಡುವುದು, ಅಲ್ಲದೇ ಶಿಬಿರಾರ್ಥಿಗಳಿಗೆ ಸ್ವಾಮಿ ವಿವೇಕಾನಂದರು ನುಡಿದಂತೆ ಮಾತೃದೇವೋಭವ, ಪಿತೃದೇವೋಭವ, ಅತಿಥಿದೇವೋಭವ ಇದು ನಮ್ಮ ಭಾರತ ದೇಶದ ಸಂಸ್ಕೃತಿ ಎಂದು ಶಿಬಿರಾರ್ಥಿಗಳಿಗೆ ಮಾರ್ಮಿಕವಾಗಿ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ 7 ದಿವಸಗಳ ವರದಿ ವಾಚನವನ್ನು ಎನ್.ಎಸ್.ಎಸ್. ‘ಬ’ ಘಟಕದ ಶ್ರೀ ಬಸವರಾಜ ಬಿರಾದಾರ ಹೇಳಿದರು ಹಾಗೂ ಶಿಬಿರದ ಸಂಪೂರ್ಣ ಕಾಲ ಸಕ್ರೀಯವಾಗಿ ಭಾಗವಹಿಸಿ ಯಶಸ್ವಿಗೆ ಕಾರಣರಾದ ಉತ್ತಮ ಶಿಬಿರಾರ್ಥಿಗಳಾದ ಶ್ರೀ ಸಾಹೀಲ್ ಅಬ್ಬಾಸ್ ಹಾಗೂ ಕು: ವಂಚನಾAಬಿಕ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯ ಮೇಲೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿ ಹಾಗೂ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಹಾಗೂ ಎನ್.ಎಸ್.ಎಸ್. ‘ಅ’ ಘಟಕದ ಅಧಿಕಾರಿಗಳಾದ ಡಾ. ದೀಪಾ ರಾಗರವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ಕು: ವೈಷ್ಣವಿ ಸ್ವಾಗತ ಗೀತೆ ಹಾಡಿದರೆ, ಕು. ವಚನಾಂಬಿಕ ಸ್ವಾಗತಿಸಿದರೆ, ಕು. ಸಾಹೀಲ್ ಅಬ್ಬಾಸ್ ನಿರೂಪಿಸಿದರೆ, ಕುಂಕುಮ ವಂದಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಶಿಬಿರಾರ್ಥಿಗಳು ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.