ಸೇವಾ ಮನೋಭಾವನೆ ಕಾರ್ಯದಿಂದ ಉತ್ತಮ ಸಾಧನೆ:ಮನಗನಾಳ
ಸೈದಾಪುರ:ಆ.1:ವೃತ್ತಿಯಲ್ಲಿ ನಾವು ಮಾಡಿದ ಸೇವಾ ಮನೋಭಾವನೆಯ ಕಾರ್ಯ ನಿವೃತ್ತಿಯ ನಂತರದಲ್ಲಿ ಉತ್ತಮ ಸಾಧನೆಗೆ ನೆರವಾಗುತ್ತದೆ ಎಂಬುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಬಿಆರ್‌ಪಿ ಬಸವರಾಜ ಮನಗನಾಳ ಅಭಿಪ್ರಾಪಟ್ಟರು.
ಪಟ್ಟಣದ ಹೊರವಲಯದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿದ್ಧಲಿಂಗಯ್ಯ ಸ್ವಾಮಿ ಅವರ ವಯೋನಿವೃತ್ತಿ ಅಂಗವಾಗಿ ಹಮ್ಮಿಕೊಂಡ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೃತ್ತಿಯ ಜೊತೆಗೆ ಸಮಾಜ ಹಾಗೂ ಸಂಘ ಸಂಸ್ಥೆಗಳಲ್ಲಿ ಕಾರ್ಯ ಮಾಡಿದವರು ಯಾವಾಗಲು ಕ್ರೀಯಾಶೀಲರಾಗಿರುತ್ತಾರೆ. ಇದಕ್ಕೆ ಶಿಕ್ಷಕ ಸಿದ್ಧಲಿಂಗಯ್ಯ ಸ್ವಾಮಿಯವರ ವ್ಯಕ್ತಿತ್ವ ನಮಗೆ ಮಾದರಿಯಾಗಿದೆ. ನಿವೃತ್ತಿಯ ನಂತರವು ನಿಮ್ಮ ಮಾರ್ಗದರ್ಶನ ನಮಗೆ ಅವಶ್ಯಕವಾಗಿದೆ. ಮುಂದಿನ ಉತ್ತಮ ದಿನಗಳನ್ನು ನಿಮ್ಮ ಕುಟುಂಬದೊAದಿಗೆ ಸಂತೋಷದಿAದ ಕಳೆಯುವಂತಾಗಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ವಯೋನಿವೃತ್ತಿ ಹೊಂದಿದ ಶಿಕ್ಷಕ ಸಿದ್ಧಲಿಂಗಯ್ಯ ಸ್ವಾಮಿ ಮಾತನಾಡಿ, ನಾನು ಕೆಲಸ ಮಾಡಿದ ಶಾಲೆಯಲ್ಲಿನ ಶಿಕ್ಷಕ ವೃಂದದವರೆಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕಳೆದ ದಿನಗಳು ಉತ್ತಮವಾಗಿದ್ದೂ ಸೇವಾ ಸಂದರ್ಭದ ಘಟನೆಗಳನ್ನು ನೆನಪಿಸಿಕೊಂಡು ಭಾವುಕರಾದರು.
ವಿದ್ಯಾ ವರ್ಧಕ ಪ್ರೌಢ ಶಾಲೆಯ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಉರ್ದು ಸಿಆರ್‌ಪಿ ಬಂದೇನವಾಜ, ಷಣ್ಮೂಕ, ಶಾಲಾ ಶಿಕ್ಷಕಿಯರಾದ ಖಾಜಾ ಬೇಗಂ, ಹಸೀನಾ ಬೇಗಂ ಮಾತನಾಡಿದರು.
ಮುಖ್ಯಗುರು ಪರಕುಂದಾ ಬೆಗಂ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಅಲ್ಲಾಭಾಷ, ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಹಿರಿಯ ಮುಖ್ಯಗುರು ಸೈಯದ ಶೇರಅಲಿ, ಸಿಆರ್‌ಪಿ ಮುಕುಂದಕುಮಾರ, ಮೃತಂಜಯ, ದೇವಪ್ಪ, ಮಲ್ಲಪ್ಪ, ವಯೋನಿವೃತ್ತಿ ಹೊಂದಿದ ಶಿಕ್ಷಕ ಸಿದ್ಧಲಿಂಗಯ್ಯ ಸ್ವಾಮಿ ಹಾಗೂ ಪತ್ನಿ ಶ್ರೀದೇವಿ, ಕುಟುಂಬ ವರ್ಗದವರು ಸೇರಿದಂತೆ ಇತರರಿದ್ದರು. ಮಾರ್ತಂಡಪ್ಪ ಕಿಲ್ಲನಕೇರಾ ಶಿಕ್ಷಕರ ಕುರಿತು ಪ್ರಾಸ್ಥಾವಿಕ ಮಾತನಾಡಿದರು. ಶ್ರೀನಿವಾಸ ಬಾಡಿಯಾಳ ನಿರೂಪಿಸಿದರು.