ಇಳಕಲ್ ಮಹಾಂತ ಶ್ರೀಗಳ ಕೊಡುಗೆ ಅಪಾರ
ಕಲಬುರಗಿ: ಆ.1:ಸಮಾಜದಲ್ಲಿರುವ ದುಶ್ಚಟಗಳನ್ನು ಬಿಡಿಸಲು ಜೋಳಿಗೆ ಹಿಡಿದು ಇಡೀ ತಮ್ಮ ಜೀವನದುದ್ದಕ್ಕೂ ಶ್ರಮಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಇಳಕಲ್ ಪೂಜ್ಯ ಡಾ.ಮಹಾಂತ ಶ್ರೀಗಳು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಪ್ರಾಚಾರ್ಯರಾದ ರವೀಂದ್ರಕುಮಾರ ಸಿ. ಬಟಗೇರಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಇಳಕಲ್ ಪೂಜ್ಯ ಡಾ.ಮಹಾಂತ ಶ್ರೀಗಳ ಜನ್ಮದಿನವಾದ ‘ವ್ಯಸನಮುಕ್ತ ದಿನಾಚರಣೆ’ಯನ್ನು ಗುರುವಾರ ಜರುಗಿದ ಆಚರಿಸಲಾಯಿತು. ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಆಸ್ಮಾ ಜಬೀನ, ಮಲ್ಲಿಕಾರ್ಜುನ, ದೊಡ್ಡಮನಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕರ್ ಹೊಸದೊಡ್ಡಿ, ರೇಣುಕಾ ಚಿಕ್ಕಮೇಟಿ, ಕವಿತಾ ಕಮಲಾಪುರಕರ್, ಉಮಾದೇವಿ ಮಾಲಿ ಪಾಟೀಲ, ಅಬ್ದುಲ್ ಸಮದ್, ಸುನಂದಾ, ಮುಖ್ಯ ಶಿಕ್ಷಕ ಶಿವಲಿಂಗಪ್ಪ ,ಶಿಕ್ಷಕರಾದ ರಮೇಶ, ಸಂಗನಗೌಡ ಪಾಟೀಲ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.