ಪರಿಸರವು ಮಾನವನ ಬದುಕಿಗಾಗಿ ನಿರ್ಮಿತವಾದ ದೇವರ ಸೃಷ್ಟಿ:ಉಪ್ಪಿನ್
ಬೀದರ:ಆ.1: ಪರಿಸರವು ಮಾನವನ ಬದುಕಿಗಾಗಿ ನಿರ್ಮಿತವಾದ ದೇವರ ಸೃಷ್ಟಿಯಾಗಿದೆ ಗಿಡಮರಗಳು,ಗುಡ್ಡ,ಬೆಟ್ಟ, ನದಿ ಸರೋವರಗಳು ಎಲ್ಲವೂ ಸಂರಕ್ಷಿಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವೀರಭದ್ರಪ್ಪ ಉಪ್ಪಿನ ನುಡಿದರು.
ಅವರು ಕಲ್ಯಾಣ ಭಾರತಿ ಕಲೆ ಸಾಹಿತ್ಯ ಮತ್ತು ಸಾಂಸ್ಕತಿಕ ಟ್ರಸ್ಟ್,ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಹಾಗು ನ್ಯೂ ಮದರ್ ತೆರೇಸಾ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಕಲ್ಯಾಣ ಕರ್ನಾಟಕ ಮಿತ್ರ ಮಂಡಳಿಯ ಕಚೇರಿಯ ಆವರಣದಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಮನುಷ್ಯನು ತನ್ನ ಅನುಕೂಲಕ್ಕಾಗಿ ಪರಿಸರ ಹಾಳು ಮಾಡುತ್ತಿರುವುದು ಅತ್ಯಂತ ಕಳವಳಿಕಾರಿ ಸಂಗತಿ ಆಗಿದೆ ಇದು ಹೀಗೆ ಮುಂದುವರೆದರೆ ಪ್ರಕೃತಿಯ ವಿಕೋಪಗಳು ಹೆಚ್ಚಾಗಿ ಮಾನವನಿಗೆ ಉಳಿಗಾಲವಿಲ್ಲ, ಅರಣ್ಯಗಳನ್ನು ನಾಶ ಮಾಡಿ ಗುಡ್ಡ ಬೆಟ್ಟ ನದಿ ಹಳ್ಳಕೊಳ್ಳ ಎಲ್ಲವುಗಳು ಮಾಯವಾಗಿ ಇಂದು ಭವ್ಯ ಬಂಗಲೆಗಳಿAದ ಕೂಡಿದ ನಗರ ಪ್ರದೇಶಗಳಾಗಿವೆ ಇದರಿಂದ ಮನುಷ್ಯನಿಗೆ ಶುದ್ಧ ಗಾಳಿ ನೀರು ಸಿಗದಂತೆ ಅನೇಕ ರೋಗಗಳಿಗೆ ಬಲಿಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಆದ್ಧರಿಂದ ಸಾಲುಮರದ ತಿಮ್ಮಕ್ಕನಂತೆ ಮರ ಗಿಡಗಳನ್ನು ಬೆಳೆಸಿ ಪೋಷಿಸಬೇಕು ಎಂದರು ಎಂದು ತಿಳಿಸಿದರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಮಾತನಾಡಿ ಪರಿಸರ ಮಾಲಿನ್ಯದಿಂದ ಇಡೀ ಜೀವ ಸಂಕುಲ ನಶಿಸಿ ಹೋಗುವ ಅಂಚಿನಲ್ಲಿದೆ ಈಗಾಗಲೇ ನಿಸರ್ಗದಲ್ಲಿನ ಅನೇಕ ಜೀವ ಜಂತುಗಳು ಪ್ರಾಣಿ ಪಕ್ಷಿಗಳು ಅವುಗಳ ಸಂತತಿಗಳನ್ನು ಕಳೆದುಕೊಂಡಿದ್ದೇವೆ ಮಾನವನು ಪ್ರಕೃತಿಯನ್ನು ಮನಬಂದAತೆ ಬಳಸಿಕೊಂಡು ವಿನಾಶದ ಅಂಚಿಗೆ ಸಿಲುಕಿ ಹಾಕುತ್ತಿದ್ದಾನೆ ಆದ್ದರಿಂದ ನಾವೆಲ್ಲರೂ ಪ್ರಕೃತಿಯನ್ನು ಉಳಿಸಬೇಕು ಮತ್ತು ಬೆಳೆಸಬೇಕು ಎಂದು ನುಡಿದರು.
ಕಲ್ಯಾಣ ಕರ್ನಾಟಕ ಮಿತ್ರ ಮಂಡಳಿಯ ಅಧ್ಯಕ್ಷರಾದ ಸಂಜೀವಕುಮಾರ ಸ್ವಾಮಿ ಅವರು ಮಾತನಾಡುತ್ತಾ ಪ್ರಪಂಚ ಎಂದರೆ ಪ್ರ ಎಂದರೆ ಪ್ರಸವ ಪಂಚ ಎಂದರೆ ಪಂಚಭೂತಗಳು. ಪಂಚಭೂತಗಳಿAದ ಕೂಡಿದ ಈ ಪ್ರಪಂಚವನ್ನು ಪಂಚತತ್ವಗಳಿAದ ಈ ಶರೀರ ಒಂದೇ ಆಗಿರುವುದರಿಂದ ಪರಿಸರವು ನಾಶವಾದಲ್ಲಿ ಪ್ರಕೃತಿಯಲ್ಲಿ ಏರುಪೇರುಗಳು ಉಂಟಾಗಿ ಮಾನವನ ಅವನತಿಗೆ ಕಾರಣವಾಗುತ್ತದೆ ಆದ್ದರಿಂದ ನಾವು ಪರಿಸರವನ್ನು ರಕ್ಷಿಸಬೇಕು ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ನುಡಿದರು.
ಕಲ್ಯಾಣ ಕರ್ನಾಟಕ ಮಿತ್ರ ಮಂಡಳಿಯ ಕಾರ್ಯದರ್ಶಿಗಳಾದ ಅನಂತ ಕುಲಕರ್ಣಿ, ಸಹ ಕಾರ್ಯದರ್ಶಿಗಳಾದ ಮಾರುತಿ ಬಿರಾದಾರ ಮಾತನಾಡಿದರು.
ಶಿಕ್ಷಣ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದಂತಹ ಬಳಿರಾಮ ಕುರನಾಳೆ, ಇಲೇಶಕುಮಾರ ಸೋನಿ,ಕರಬಸಪ್ಪ, ನಾಗಯ್ಯ ಸ್ವಾಮಿ,ಜಯಪ್ರಕಾಶ, ಶಹಾಬಾಜ ಹುಸೇನರನ್ನು
ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮನೋಹರ ಸಿಂಗ್ ಪಾಟೀಲ್, ನಂದ ಕುಮಾರ ಶಿರಸಿ, ಧೂಳಪ್ಪ ಬಿರಾದಾರ, ನರ್ಸಿಂಗರಾವ ಕುಲಕರ್ಣಿ ರಾಜಕುಮಾರ ಬಿರಾದಾರ, ಮಹೇಶ ಬಿರಾದಾರ, ಉಪಸ್ಥಿತರಿದ್ದರು.