ಗರ್ಭಕಂಠದ ಕ್ಯಾನ್ಸರ್ ಅರಿವು
ಕಲಬುರಗಿ:ಆ.1:ನಗರದ ದಕ್ಷಿಣ ಹಳೆ ಜೇವರ್ಗಿ ರಸ್ತೆಯ ಸರಕಾರಿ ಫ್ರೌಢ ಶಾಲೆಯಲ್ಲಿ ಗುಲ್ಬರ್ಗದ ಇನ್ನರ್ ವೀಲ್ ಕ್ಲಬ್ ನವರು ಗರ್ಭಕಂಠದ ಕ್ಯಾನ್ಸರ್ ಅರಿವು ಕಾರ್ಯಕ್ರಮ ಹಮ್ಮಿಕೊಂಡು ಹೆಣ್ಣು ಮಕ್ಕಳಿಗೆ ವಿಶೇಷ ಗರ್ಭ ಕ್ಯಾನ್ಸರಿನ ಬಗ್ಗೆ ಡಾ.ಸುಷ್ಮ ಕುರಲ್ ಉಪನ್ಯಾಸ ನೀಡಿದರು.
ವೇದಿಕೆ ಮೇಲೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಜ್ಯೋತಿ ರಾಠೋಡ್. ಕ್ಲಬ್ ನ ಕಾರ್ಯದರ್ಶಿ ಇಂದಿರಾ ರಾಠೋಡ್ , ಕ್ಲಬ್ ನ ಖಜಾಂಚಿ ಲತಾ ದೇಶಪಾಂಡೆ. ಶಾಲೆಯ ಮುಖ್ಯೊಪಾಧ್ಯಾಯರಾದ ಸಾವಿತ್ರಿ , ಶಿಕ್ಷಕಿಯರಾದ ಜ್ಯೋತಿ ಪಾಟೀಲ್. ಶೈಲಜಾ ಹಾಗೂ ಇನ್ನರ್ ವೀಲ್ ಸಹೋದರಿಯರು , ವಿದ್ಯಾರ್ಥಿನಿಯರು , ಶಾಲೆಯ ಶಿಕ್ಷಕರ ಸಿಬ್ಬಂದಿಯು ಉಪಸ್ಥಿತರಿದ್ದರು.