ಅ. 4 ರಂದು ಕಿಶೋರ ಕುಮಾರ ಜನ್ಮ ದಿನಾಚರಣೆಯ ಸಂಭ್ರಮ
ಕಲಬುರಗಿ:ಆ.1: ಹಿಂದಿ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕ ಮತ್ತು ನಟ ಕಿಶೋರ ಕುಮಾರ ಅವರ 95ನೇ ಜನ್ಮ ದಿನಾಚರಣೆಯನ್ನು ಅಗಸ್ಟ್ 4 ರಂದು ಸಂಜೆ 6-00 ಗಂಟೆಗೆ ನಗರದ ಸರದಾರ ವಲ್ಲಭಭಾಯಿ ಪಟೇಲ ವೃತ್ತದ ಬಳಿಯ ಕನ್ನಡ ಭವನದಲ್ಲಿ ಕಲಾಕಾರ ತಂಡದ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗಾಯಕರಾದ ಚಾಂದ್ ಜಾಕ್ಸನ್, ವಿಠಲ್ ಮೇತ್ರೆ, ರಾಜೇಶ ರಾಂಪೂರೆ, ಚಂದ್ರಶೇಖರ ರೆಡ್ಡಿ, ರಾಜು ರೆಡ್ಡಿ, ಝಮೀರ್ ಅಹ್ಮದ್, ಮಹಾಲಿಂಗ ಸುಂಕದ್, ಮಹಾದೇವ ಅಸ್ಟಗಿ, ರಾಜು ಕೋಬಾಳ, ಪಾರ್ವತಿ ಉರ್ಕಿಮಠ, ಶೈಲಜ ಬಗ್ಗಲ್, ಡಾ? ಶಶಿರೇಖಾ, ಇವರುಗಳು ಕಿಶೋರ ಕುಮಾರ ರವರ ಹಾಡುಗಳನ್ನು ಹಾಡುವ ಮೂಲಕ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡುವರು.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಕುಟುಂಬ ಮತ್ತು ಗೆಳೆಯರೊಂದಿಗೆ ಆಗಮಿಸಿ ಸಂಗೀತದ ಆನಂದ ಸವಿಯಲು ಕಲಾಕಾರ ತಂಡದ ಹಿರಿಯರಾದ ಚಾಂದ ಅಕ್ತರ್ ಪತ್ರಿಕೆಯ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ