ಶಿಕ್ಷಕಿ ಶೋಭಾ ಕುಲಕರ್ಣಿಗೆ ಆತ್ಮೀಯ ಬಿಳ್ಕೊಡುಗೆ
ಕಲಬುರಗಿ:ಆ.೧: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅವರಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೧೪ ವರ್ಷ ಸೇವೆ ಸಲ್ಲಿಸಿ ಶೋಭಾ ಬಿ.ಕುಲಕರ್ಣಿ ಸಹ ಶಿಕ್ಷಕಿಯಾಗಿ ವಯೋ ನಿವೃತ್ತಿ ಪ್ರಯುಕ್ತ ಬಿಳ್ಕೋಡುಗೆ ಸಮಾರಂಭ ಮಂಗಳವಾರ ಮಧ್ಯಾಹ್ನ ಜರುಗಿತು.
ರೇಣುಕಾ ಪ್ರಾರ್ಥಿಸಿದಳು, ಚಂದಮ್ಮಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿವಮ್ಮ ಪ್ರಾಸ್ತಾವಿಕ ಮಾತನಾಡಿದರು. ನಾನಾಗೌಡ ವಂದಿಸಿದರು. ಕುಕನೂರ ಮು. ಗು ಝಾಕೀರ ಹುಸೇನ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಮು.ಗು. ಮಡಿವಾಳಪ್ಪ, ಪ್ರೌ. ಶಾ. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತಯ್ಯಾ ಗೊಂಬಿಮಠ, ಶ್ರೀಮಂತ ಕುಂಬಾರ, ದೇವಿದಂದ್ರಪ್ಪ,ಅನೀಲಕುಮಾರ, ಇಮಾಮ್ ಪಟೇಲ್ ಶಾಖಾಪುರ, ಬಸಣ್ಣ,ಗೀತಾ,ತಂಗೆಮ್ಮಾ ಪತ್ರಕರ್ತ ನಾರಾಯಣ ಎಂ ಜೋಶಿ ಅವರು ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಶಾಲೆಯ ಆವರಣದಲ್ಲಿ ಗಿಡಗಳನ್ನು ಬೆಳಸಿದ್ದಕ್ಕೆ ಶ್ಲಾಘನೀಯ ಕಾರ್ಯ ಎಂದರು ಪರಿಸರ ಕಾಪಾಡುವುದು ನಮ್ಮಲ್ಲರ ಹೊಣೆ ಎಂದರು.
ವೇದಿಕೆ ಮೇಲೆ ಇದ್ದರು.
ಶೋಭಾ ಕುಲಕರ್ಣಿ ಅವರಿಗೆ ಸನ್ಮಾನಿಸಿ ನೆನಪಿನ ಶಾಲೆಯಲ್ಲಿ ಅವಿಸ್ಮರಣೀಯ ಛಾಯಾಚಿತ್ರ
ಕಾಣಿಕೆ ನೀಡಿದರು. ಶೋಭಾ ಕುಲಕರ್ಣಿ ಮಾತನಾಡುತ್ತಾ ನಾನು ಮದುವೆಯಾಗಿ ಕಲಬುರಗಿ ಬಂದಾಗ ಶಿಕ್ಷಕಿಯಾಗಲು
ನಮ್ಮ ಮಾವ ದಿವಂಗತ ನಿವೃತ್ತ ಆದರ್ಶ ಶಿಕ್ಷಕ ಮಧುಕರರಾವ ಜೋಶಿ ನನಗೆ ಪ್ರೋತ್ಸಾಹ ನೀಡಿದ್ದನ್ನು ಕೊಂಡಾದಿದರು.
ಪ್ರೌಢ ಶಾಲೆ ಅವರಾದ ದೈಹಿಕ ಶಿಕ್ಷಕ ಬಸವರಾಜ ಕುಂಬಾರ ಅವರಿಗೆ ಪಕ್ಕದ ಗ್ರಾಮಕ್ಕೆ ವರ್ಗಾವಣೆ
ನಿಮಿತ್ತ ಬೀಳ್ಕೂಡುಗೆ ಸನ್ಮಾನ ಮಾಡಲಾಯಿತು.
ಅವರಾದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕ ವೃಂದವರು,ಅAಗನವಾಡಿ ಶಿಕ್ಷಕರು, ಬಿಸಿ ಊಟ ಸಿಬ್ಬಂದಿವರ್ಗದವರು ಇದ್ದರು.
ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು.
ಶೋಭಾ ಬಿ ಕುಲಕರ್ಣಿ ಅವರು ವಿಜಯಪುರ ಜಿಲ್ಲೆಯಲ್ಲಿ ೦೧-೦೮-೧೯೬೪ ರಲ್ಲಿ ಜನಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೇವರ್ಗಿ ತಾಲ್ಲೂಕಿನ ಮಂದೇವಾಲ ೦೧-೦೯-೧೯೯೮ ರಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದರು. ( ೯ ವರ್ಷ ಸೇವೆ)
೨೦೦೭ ರಲ್ಲಿ ನಾಲವಾರ ಸ್ಟೇಷನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩ ವರ್ಷ
ಸೇವೆ,
೨೦೧೦ ರಲ್ಲಿ ಜೇವರ್ಗಿ ತಾಲ್ಲೂಕಿನ ಅವರಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶಿಕ್ಷಕಿಯಾಗಿ ಒಟ್ಟು ೨೬ ಸೇವೆಸಲ್ಲಿಸಿ ಇಂದು ಸೇವೆಯಿಂದ ನಿವೃತ್ತಿ ಹೊಂದಿದರು.