ರಾಜಗುರುಗೆ ಪಿಹೆಚ್ ಡಿ
ಬಳ್ಳಾರಿ, ಅ,1- ಕಡ್ಡಿರಾಂಪುರದ  ರಾಜಗುರು  ಎಸ್.ಹೆಚ್. ಎಂ. ಇವರು  ಡಾ. ಗೋಪಾಲ್ ಎನ್. ಇವರ ಮಾರ್ಗದರ್ಶನದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲ ಬಳ್ಳಾರಿಗೆ ಸಲ್ಲಿಸಿದ “ಎಫೆಕ್ಟಿವ್ ನೆಸ್ ಆಫ್ ಇನ್ಫಾರ್ಮೆಶನ್ ಪ್ರೊಸೆಸಿಂಗ್ ಅಪ್ರೋಚ್ ಆನ್ ಸೆಲ್ಫ್ ಕಾನ್ಸೆಪ್ಟ್, ಸ್ಟೈಲ್ ಆಫ್ ಲರ್ನಿಂಗ್ ಅಂಡ್ ಥಿಂಕಿಂಗ್ ಅಂಡ್ ಅಕಾಡೆಮಿಕ್ ಅಚೀವ್ ಮೆಂಟ್ ಇನ್ ಫಿಸಿಕ್ಸ್ ಅಮಾಂಗ್ ಪ್ರೀ ಯೂನಿವರ್ಸಿಟಿ ಕಾಲೇಜ್ ಸ್ಟೂಡೆಂಟ್ಸ್” ಎಂಬ ಮಹಾ ಪ್ರಬಂಧಕ್ಕೆ  ಪಿಹೆಚ್. ಡಿ  ಪದವಿ ಪ್ರಧಾನ ಮಾಡಲಾಗಿದೆ. ಇವರು  ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.