ಸಾರಿಗೆ ಬಸ್, ಬುಲೇರೋ ಡಿಕ್ಕಿ: ಬುಲೇರೋ ಚಾಲಕ ಸಾವು
ವಿಜಯಪುರ,ಆ.1: ಸಾರಿಗೆ ಬಸ್ ಹಾಗೂ ಬುಲೇರೋ ಮುಖಾಮುಖಿ ಡಿಕ್ಕಿಯಾಗಿ ಬುಲೇರೋ ಚಾಲಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಬಳಿ ಬುಧವಾರ ಸಂಜೆ ನಡೆದಿದೆ.
ದೇವರ ಹಿಪ್ಪರಗಿ ತಾಂಡಾದ ನಿವಾಸಿ ಆನಂದ ಶಂಕರ ಜಾಧವ (43) ಮೃತಪಟ್ಟ ಬುಲೇರೋ ಚಾಲಕ ಎಂದು ಗುರುತಿಸಲಾಗಿದೆ.
ಬಸ್ ಹಾಗೂ ಬುಲೇರೋ ಡಿಕ್ಕಿಯ ವೇಳೆಯೇ ಬಸ್ ಗೆ ಹಿಂಬದಿಯಿAದ ಎರ್ಟಿಗಾ ಕಾರ್ ಕೂಡ ಡಿಕ್ಕಿಯಾಗಿದ್ದು, ಎರ್ಟಿಗಾ ಕಾರ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸುದ್ದಿ ತಿಳಿದ ತಕ್ಷಣ ಮನಗೂಳಿ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಕಾಂತ ಕಾಂಬಳೆ ಸಿಬ್ಬಂದಿ ಜೊತೆಗೆ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡರು.