ಹಾರಕಭಾವಿ ಗ್ರಾಮದಲ್ಲಿ ಹಡಪದ ಜಯಂತ್ಯೋತ್ಸವ ಅದ್ದೂರಿ.
ಕೂಡ್ಲಿಗಿ. ಆ.1 :- ತಾಲೂಕಿನ ಹಾರಕಭಾವಿ ಗ್ರಾಮದಲ್ಲಿ ಹೆಚ್ಚಾಗಿ ಹಡಪದ ಸಮುದಾಯವಿದ್ದು ವಿಶೇಷವಾಗಿ ಗ್ರಾಮದಲ್ಲಿ  ವಿವಿಧ ವಾದ್ಯಗಳಿಂದ ಗೊಂಬೆಗಳ ಕುಣಿತದ ಮೂಲಕ ಅದ್ದೂರಿ ಮೆರವಣಿಗೆ ಜರುಗಿತು.
ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಸೇರಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಪ್ರಮುಖ ಬೀದಿಗಳಲ್ಲಿ ನೂರಾರು ಜನತೆ ವಾದ್ಯಗಳ ತಾಳಕ್ಕೆ ಹೆಜ್ಜೆ ಹಾಕಿ ಮೆರವಣಿಗೆ ನಡೆಸಿ ಜಯಂತ್ಯೋತ್ಸವಕ್ಕೆ ಮೆರಗುತಂದರು.