ಅ.10 ರೊಳಗೆ ರಿನಿವಲ್ ಮಾಡಿಕೊಳ್ಳಿನಗರದ ಟ್ರೇಡರ್ಸ್ ಗಳಿಗೆ ಮೇಯರ್ ಎಚ್ಚರಿಕೆ
* 6400 ನೋಂದಣಿ
* 1200 ಮಾತ್ರ ರಿನಿವಲ್
* ಅನಧಿಕೃತ ಟ್ರೇಡರ್ ಗಳ ಪತ್ತೆಗೆ ಕಾರ್ಯಾಚರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದಲ್ಲಿನ ಟ್ರೇಡರ್ಸ್ ದಾರರು ಈ ತಿಂಗಳ 10 ರೊಳಗೆ ಪಾಲಿಕೆಯಲ್ಲಿ ರಿನಿವಲ್ ಮತ್ತು ಹೊಸದಾಗಿ ವ್ಯಾಪಾರ ಆರಂಭಿಸಿರುವವರು ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಂತರ ಕಾರ್ಯಾಚರಣೆ ನಡೆಸಿ ಮಳಿಗೆಗಳಿಗೆ ಬೀಗ ಜಡಿಯಲಿದೆಂದು ಮೇಯರ್ ಮುಲ್ಲಂಗಿ‌ ನಂದೀಶ್ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ನಗರದಲ್ಲಿ 6400 ಜನ ವ್ಯಾಪಾರಿಗಳು ಟ್ರೇಡ್ ಲೈಸೆನ್ಸ್ ಪಡೆದಿದ್ದಾರೆ. ಅವರಲ್ಲಿ ಸಧ್ಯ ಕೇವಲ 1200 ಜನ ಮಾತ್ರ ರಿನಿವಲ್ ಮಾಡಿಸಿಕೊಂಡಿದ್ದಾರೆ.  ಉಳಿದವರು ಮಾಡಿಸಿಲ್ಲ. ಇವರು ರಿನಿವಲ್ ಮಾಡುಸಬೇಕು.
ಇನ್ನು ಒಂದು ಅಂದಾಜಿನ ಪ್ರಕಾರ 9 ಸಾವಿರಕ್ಕೂ ಹೆಚ್ವು ಟ್ರೇಡರ್ಸ್ ನಗರದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿದೆ. ಪಾಲಿಕೆಯಲ್ಲಿ ಲೈಸೆನ್ಸ್ ಪಡೆಯದೇ ವ್ಯಾಪಾರ ವಹಿವಾಟು ನಡೆಸುವವರು ಸಹ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಾರೆ, ಅ 10 ರ ನಂತರ ಪಾಲಿಕೆ ಸಿಬ್ಬಂದಿ ಪರಿಶೀಲನೆ ನಡೆಸಿ, ರಿನಿವಲ್ ಮಾಡದ ಮತ್ತು ಟ್ರೇಡ್ ಲೈಸೆನ್ಸ್ ಪಡೆಯದವರ ಪರಿಶೀಲಿನೆ ನಡೆಸಿ. ಅವರ ಮಳಿಗೆಗಳಿಗೆ ಕಾನೂನು ರೀತಿಯಲ್ಲಿ ಬೀಗ ಜಡಿಯಲಿದೆ ಎಂದು  ಎಚ್ಚರಿಕೆ ನೀಡಿದ್ದಾರೆ.
ಪಾಲಿಕೆವತನ್ನ ಬಜೆಟ್ ನಲ್ಲಿ ವಾರ್ಷಿಕ 64 ಲಕ್ಷ ರೂ ಟ್ರೇಡ್  ಲೈಸೆನ್ಸ್ ಗಳ ಮೂಲಕ ಆದಾಯ ಪಡೆಯುವ ಗುರಿ ಹೊಂದಿದೆ.
ಬಲ್ಲ ಮೂಲಗಳ ಪ್ರಕಾರ ಪಾಲಿಕೆಯ ಕಟ್ಟಡದಲ್ಲಿನ ಅನೇಕ ಮಳಿಗೆಗಳಲ್ಲಿನ ಟ್ರೇಡರ್ಸ್ ಗಳೇ ರಿನಿವಲ್ ಮಾಡಿಲ್ಲ ಎಂಬ ಮಾಹಿತಿ ಇದೆ.