ವಿಶ್ವ ರೇಂಜರ್ ದಿನದ ಅಂಗವಾಗಿ ಅಂಚೆ ಚೀಟಿ ಬಿಡುಗಡೆ
ಸಂಜೆವಾಣಿ ವಾರ್ತೆ
ಬಳ್ಳಾರಿ,ಅ.1-  ವಿಶ್ವದಾದ್ಯಂತ ಅರಣ್ಯ, ವನ್ಯಜೀವಿಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವವರನ್ನು ವಿಶೇಷವಾಗಿ ಫಾರೆಸ್ಟ್ ರೇಂಜರ್ಗಳು, ಮುಂಚೂಣಿಯ ಸಿಬ್ಬಂದಿ, ಕರ್ತವ್ಯದ ಲ್ಲಿದ್ದಾಗ ಗಾಯಗೊಂಡ ಅಥವಾ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಪ್ರತಿ ವರ್ಷ  “ವಿಶ್ವ ರೇಂಜರ್ ದಿನ” ವನ್ನು ಜುಲೈ ೩೧ ರಂದು ಆಚರಿಸಲಾಗುತ್ತದೆ.   ಈ ವಿಶೇಷ ದಿನವನ್ನು ಸಾಕ್ಷಿಕರಿಸಿ ಭಾರತೀಯ ಅಂಚೆ ಇಲಾಖೆಯು ಕರ್ನಾಟಕ ಅರಣ್ಯ ಇಲಾಖೆಯ  ಸಹಯೋಗದೊಂದಿಗೆ  ಅರಣ್ಯ ಸೇವೆಯಲ್ಲಿ ನಿರತ ಮುಂಚೂಣಿ ಸಿಬ್ಬಂದಿಗಳ ಗೌರವಾರ್ಥ  ದಿನಾಂಕ 31.07.2024 ರಂದು ಬಳ್ಳಾರಿಯ ಬೆಳಗಲ್ ರಸ್ತೆ ಸಸ್ಯ ಕ್ಷೇತ್ರದಲ್ಲಿ  ನೂತನವಾಗಿ  ಉದ್ಘಾಟನೆಗೊಂಡ “ ಪ್ರಕೃತಿ ಭವನ” ದಲ್ಲಿ  ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಗೊಳಿಸಲಾಯಿತು. 
ವಿಶೇಷ ಅಂಚೆ ಲಕೋಟೆಯ ಬಿಡುಗಡೆಯ ಬಳಿಕ ಮಾತನಾಡಿದ ಅಂಚೆ ಅಧಿಕ್ಷಕಾರದ ಶ್ರೀಯುತ ಪಿ. ಚಿದಾನಂದ ರವರು ವಿಶೇಷ ಅಂಚೆ ಲಕೋಟೆಯು ಅಂಚೆ ಕಛೇರಿಗಳ ಮೂಲಕ ಅಂಚೆ ಚೀಟಿ ಸಂಗ್ರಹಕಾರರ ಮೂಲಕ ವಿಶ್ವದಾದ್ಯಂತ ರೇಂಜರ್ ಗಳ ಕುರಿತು ಅರಿವುಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು
 ಹಾಗೂ ಅಂಚೆ ಇಲಾಖೆಯಲ್ಲಿಯ ವಿವಿಧ ಜನಪ್ರೀಯ ಉಳಿತಾಯ ಯೋಜನೆಗಳು, ಅಂಚೆ ಜೀವ ವಿಮಾ, ಗ್ರಾಮೀಣ ಅಂಚೆ ಜೀವ ವಿಮಾ, ಐಪಿಪಿಬಿ ಅಪಘಾತ ವಿಮಾ ಯೋಜನೆಗಳ ಲಾಭವನ್ನು ಅರಣ್ಯ ಇಲಾಖೆಯ  ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರು ಪಡೆದುಕೊಳ್ಳಲು ಮನವಿ ಮಾಡಿದರು.
  ಶಾಸಕ ಭಾರತ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು, ಮೇಯರ್  ಮುಲ್ಲಂಗಿ ನಂದೀಶ್  ಅರಣ್ಯ ಇಲಾಖೆಯ   ಡಾ. ಸಂಜಯ್ ಬಿಜ್ಜೂರ್ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಕಾಂಪಾ) , ಸ್ಮೀತಾ  ಬಿಜ್ಜೂರ್,, ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ   ಸಂದೀಪ್ ಹಿಂದುರಾವ್ ಸೂರ್ಯವಂಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ,  ಅರ್ಸಲನ್  ಉಪ ಅರಣ್ಯ ಸಂರಕ್ಷಣಾಧಿಕಾರಿಗಳು , ವಿಜಯನಗರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು , ಅಂಚೆ ಚೀಟಿ ಸಂಗ್ರಹಕಾರರು, ವಿಧ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.
ಈ ವಿಶೇಷ ಲಕೋಟೆಯ ಮೇಲೆ ೨೦೨೪ ರ ವಿಶ್ವ ರೇಂಜರ್ ದಿನದ ಧ್ಯೇಯ “೩೦ ರೊಳಗೆ ೩೦” . ಅಂದರೆ ೨೦೩೦ ರೊಳಗೆ ೩೦% ರಷ್ಟು ಭೂ ಪ್ರದೇಶವನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಬೇಕು ಮತ್ತು ನಿರ್ವಹಿಸಬೇಕು ಎಂಬ ಮಹಾದುದ್ದೆಶವನ್ನು  ಹೊಂದಿರುವುದು ವಿಶೇಷ.