ಇದು ನಿಮ್ಮ ವಾಣಿವಾಹನ ಚಾಲಕರೇ “ಹುಷಾರ್” !
ಮಾನ್ಯರೇ,
ಈ ದೊಡ್ಡ ಕುಣಿ ಬಿದದ್ದು ಬೇರೆ ಎಲ್ಲಿಯೂ ಅಲ್ಲ.ನೀವು ಕೆ.ಈ.ಬಿ.ಆಫೀಸ್ ಕಡೆ. (ಮೇನ್ ಆಫೀಸ್)ಹೋಗುವ ದಾರಿಯಲ್ಲಿ ಇದೆ‌.ಅನಂತಪುರ ರಸ್ತೆ ಕಡೆ ರಸ್ತೆ ದುರಸ್ತಿ ಕಾರ್ಯ ಇರುವುದರಿಂದ ಕೆ.ಸಿ.ರಸ್ತೆಯ ಕಡೆಯಿಂದ    ವಾಹನಗಳು ಬಾರಿ ಸಂಖ್ಯೆಯಲ್ಲಿ ಓಡಾಡುತ್ತವೆ.ನೀವು ಅಪ್ಪಿ ತಪ್ಪಿ ಕುಣಿ ನೋಡಲಾರದೆ ವಾಹನ ಚಾಲನೆ ಮಾಡಿದರೆ ಗಂಡಾಂತರ ಕಟ್ಟಿ ಬುತ್ತಿ.
ಈ ಕುಣಿ ಬಿದ್ದಿರುವುದು ಮೊದಲೆನೇನಲ್ಲ.ಎರಡು ಬಾರಿ ಕುಣಿ ಮುಚ್ಚಲಾಗಿದೆ. ದಟ್ಟ ವಾಹನಗಳು ಓಡಾಡುವುದು ರಿಂದ ಮತ್ತೆ ಕುಣಿ ಬಿದ್ದಿದೆ.
ವಾಹನ ಚಾಲಕರ ದೃಷ್ಟಿಯಿಂದ,ಸಂಬಂಧ ಪಟ್ಟ ಇಲಾಖೆ  ಬಿದ್ದಿರುವ ಕುಣಿಯನ್ನು ತಕ್ಷಣ    ಮುಚ್ಚಿ,ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಿ ಎಂದು ಕಳಕಳಿಯ ಮನವಿ ಅಷ್ಟೆ.
ಧನ್ವಂತರಿ.ಮಾನವಿ, ಬಳ್ಳಾರಿ.