ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲು ಕರೆ
ಚನ್ನಮ್ಮನ ಕಿತ್ತೂರು,ಆ.೧: ನಿಮಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಕಾರ್ಖಾನೆಯಿಂದ ದೊರಕಿಸಿಕೊಡಲಾಗುವುದು. ನಿಮ್ಮ ಜೊತೆಯಲ್ಲಿ ನಾವಿದ್ದೇವೆ ನೀವೆಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಕಾರ್ಖಾನೆ ಏಳಿಗೆಗೆ ಶ್ರಮವಹಿಸಬೇಕೆಂದು ಕಾರ್ಮಿಕರಿಗೆ ನಿರ್ದೇಶಕರುಗಳಾದ ಸಾವಂತ ಕಿರಬನವರ, ಶಿದ್ದಪ್ಪ ದೂರಪ್ಪನವರ ಜಂಟಿಯಾಗಿ ಹೇಳಿದರು.
ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಕಾರ್ಖಾನೆ ಮಿಲ್ ರೂಲರ್ ಪೂಜೆ ಹಾಗೂ ನಿವೃತ್ತ ಕಾರ್ಮಿಕರÀ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಕಾರ್ಖಾನೆ ಆದಷ್ಟು ಬೇಗನೇ ಪ್ರಾರಂಭಿಸೋಣ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಮೊದಲು ಕಂತವಾಗಿ ರೂ. ೨೮೦೦ ರೂ. ಎರಡನೇ ತಿಂಗಳ ನಂತರ ೨ನೇ ಕಂತವಾಗಿ ರೂ. ೨೦೦ ರೂ. ಕೊನೆಗೆ ರೂ. ೫೦/- ಈ ತೆರನಾಗಿ ಕಾರ್ಖಾನೆಗ ಕಬ್ಬು ಪೂರೈಸಿದ ರೈತರಿಗೆ ಹಣ ಬಟವಡೆ ಮಾಡಲಾಗುವುದು. ಅದಕ್ಕಾಗಿ ರೈತರು ಸಹಕರಿಸಿ ಬೇರೆಡೆ ಕಾರ್ಖಾನೆಗಳಿಗೆ ಕಬ್ಬು ಪೂರೈಸದೇ ಈ ಕಾರ್ಖಾನೆ ನಿಮ್ಮದೆಂದು ತಿಳಿದು ಇಲ್ಲಿಯೇ ಕಬ್ಬು ಪೂರೈಸಿದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಖಾನೆ ಹೊಂದುತ್ತದೆAಬ ಆತ್ಮವಿಶ್ವಾಸ ನಮಗಿದೆಯೆಂದರು.
ನೂತನ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಮಾತನಾಡಿ ನಿಮ್ಮ ಕಷ್ಟಗಳಿಗೆ
ನಿರ್ದೇಶಕ ಮಂಡಳಿ ಮತ್ತು ನಾವಿದ್ದೇವೆ. ಉತ್ತಮವಾಗಿ ಕಬ್ಬು ನೂರಿಸಿ ನಿಮ್ಮ ಪಿಎಫ್ ಸರಿ ಮಾಡಿ ನಿಮ್ಮ ಸಂಭಳ ತಪ್ಪದೇ ಪ್ರತಿ ತಿಂಗಳು ನೀಡಿ ಬೋನಸ್ ಸಹ ನೀಡಲಾಗುವುದು ಇದರಲ್ಲೇನೂ ಎರಡು ಮಾತಿಲ್ಲ ಕಾರ್ಮಿಕರು ಕಾರ್ಖಾನೆಯತ್ತ ಹೆಚ್ಚಿನ ಗಮನ ಹರಿಸಿ ಅಭಿವೃದ್ದಿಗೊಸ್ಕರ ಶ್ರಮವಹಿಸಿ ಅಭಿವೃದ್ಧಿಗೆ ನಿಮ್ಮ ಪಾತ್ರ ಬಹಳ ಮುಖ್ಯ. ರೈತರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡೋಣವೆಂದರು.
ಹಂಗಾಮಿ ಕಾರ್ಮಿಕ ಸಂಘದ ಅಧ್ಯಕ್ಷ ರಾಜೇಂದ್ರ ಶಿರಮೋಜಿ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಮಿಕರ ಕಷ್ಟ-ನೋವುಗಳಿಗೆ ಸ್ಪಂದಿಸಿ ತಪ್ಪದೇ ಪ್ರತಿ ತಿಂಗಳು ಸಂಬಳ ನೀಡಿ ಅವರ ಪಿಎಫ್ ಸರಿ ಮಾಡಿ ಬೋನಸ್ ನೀಡಬೇಕು ಎಂದರು.
ಕಾರ್ಖಾನೆ ಉಪಾಧ್ಯಕ್ಷೆ ಲಕ್ಷಿö್ಮÃ ಅರಳಿಕಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಖಾನೆ ವಿಭಾಗಾಧಿಕಾರಿಗಳಾದ ಬಸವರಾಜ ಇಟಗಿ, ದೇಸಾಯಿ ಕಾರ್ಖಾನೆ-ಕಾರ್ಮಿಕರ ಹಿತನುಡಿಯನ್ನಾಡಿದರು. ಈ ಸಮಯದಲ್ಲಿ ನಿವೃತ್ತಿ ಹೊಂದಿದ ಕಾರ್ಮಿಕರು ಬಸವರಾಜ ಮುತ್ನಾಳ, ಶಿವಪ್ಪ ಕಿಲ್ಲೇದಾರ, ಸುಧೀರ ಕುಲಕರ್ಣಿ, ಸಿದ್ದಪ್ಪ ತಳವಾರ.
ನಿರ್ದೇಶಕರುಗಳಾದ ಲಕ್ಷö್ಮಣ ಎಮ್ಮಿ, ಶಂಕರಗೌಡ ಪಾಟೀಲ, ಜ್ಯೋತಿಬಾ ಹೈಬತ್ತಿ, ಮಂಜುನಾಥ ಪಾಟೀಲ, ಬಸವರಾಜ ಪುಂಡಿ, ಅಶೋಕ ಬೆಂಡಿಗೇರಿ, ಭರತೇಶ ಶೇಬಣ್ಣವರ, ಬಸವರಾಜ ಬೆಂಡಿಗೇರಿ, ಸಂಜೀವ ಹುಬಳೇಪ್ಪನವರ, ಮೀನಾಕ್ಷಿ ನೆಲಗಳಿ, ಕಛೇರಿ ಅಧೀಕ್ಷಕ ಬಸವರಾಜ ಪಾಗಾದ, ಕಾರ್ಖಾನೆ ಇಂಜಿನಿಯರಗಳು, ಸಿಬ್ಬಂದಿ ಸೇರಿದಂತೆ ರೈತರಿದ್ದರು. ಹಂಗಾಮಿ ಕಾರ್ಮಿಕ ಸಂಘದ ಉಪಾಧ್ಯಕ್ಷ ನಾರಾಯಣ ಜೋಶಿ ಸ್ವಾಗತಿಸಿದರು.